ತಮ್ಮ ಭಾಷಣದ ವೇಳೆ 'ಬಾಹುಬಲಿ'ಯ 'ಕಟ್ಟಪ್ಪ'ನನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

ಕೇವಲ ಪ್ರೇಕ್ಷಕರು ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಕೂಡ ಎಸ್. ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪನನ್ನು...
ನರೇಂದ್ರ ಮೋದಿ
ನರೇಂದ್ರ ಮೋದಿ

ಮುಂಬಯಿ: ಕೇವಲ ಪ್ರೇಕ್ಷಕರು ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಕೂಡ ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪನನ್ನು ನೆನಪಿಸಿಕೊಳ್ಳುತ್ತಾರೆ.

ಬಾಹುಬಲಿ ಎರಡನೇ ಭಾಗದ ಟೀಸರ್ ನಿನ್ನೆಯಷ್ಟೇ ಬಿಡುಗಡೆಗೊಂಡು ಭಾರೀ ಸದ್ದು ಮಾಡುತ್ತಿದೆ. ಇದೇ ವೇಳೆ ಕಳೆದ ತಿಂಗಳು ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಕಟ್ಟಪ್ಪನನ್ನು  ಸ್ಮರಿಸಿದ್ದಾರೆ. ಆಶ್ಚರ್ಯ ಬೇಡ, ಇದಕ್ಕೆ ಉತ್ತರ ಇಲ್ಲಿದೆ,

ಕೆಲ ಸಮಯದ ಹಿಂದೆ ಬಾಹುಬಲಿ ಎಂಬ ಸಿನಿಮಾ ಬಿಡುಗಡೆಯಾಗಿತ್ತು, ಆ ಸಿನಿಮಾದಲ್ಲಿ ಕಟ್ಟಪ್ಪ ಎಂಬ ಪಾತ್ರವಿತ್ತು, ಬಾಹುಬಲಿಯನ್ನು ನಾಶ ಪಡಿಸಿದ ಕಟ್ಟಪ್ಪ...ಕಾನೂನಿನ ದಂಡ ತನ್ನ ಅಧಿಕಾರವನ್ನು ಮಾರ್ಚ್ 11 ರಂದು ತೋರಿಸುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಬಾಹುಬಲಿಯ ಕಟ್ಟಪ್ಪನನ್ನು ನೆನಪಿಸಿಕೊಂಡಿದ್ದರು ಎಂದು ಮಾಧ್ಯಮ ವೊಂದು ವರದಿ ಮಾಡಿದೆ. ಪ್ರಧಾನಿ ಮೋದಿ ಅವರು ಮಾತನಾಡಿರುವ ವಿಡಿಯೋ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com