ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಗೆ ಹಿನ್ನಡೆ: ಪಕ್ಷ ತೊರೆದ ಪತಿ ಮಾಧವನ್

ಎಂಜಿಆರ್ ಅಮ್ಮಾ ದೀಪಾ ಪೆರವೈ ಪಕ್ಷ ತೊರೆಯುವ ಮೂಲಕ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಗೆ ...
ಪತಿ ಮಾಧವನ್ ಜೊತೆ ದೀಪಾ ಜಯಕುಮಾರ್
ಪತಿ ಮಾಧವನ್ ಜೊತೆ ದೀಪಾ ಜಯಕುಮಾರ್
Updated on

ಚೆನ್ನೈ: ಎಂಜಿಆರ್ ಅಮ್ಮಾ ದೀಪಾ  ಪೆರವೈ ಪಕ್ಷ ತೊರೆಯುವ ಮೂಲಕ ತಮಿಳುನಾಡು ಮಾಜಿ ಮುಖ್ಯಮಂತ್ರಿ  ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಗೆ  ಆಕೆಯ ಪತಿ ಮಾಧವನ್ ಆಘಾತ ನೀಡಿದ್ದಾರೆ.

ಜಯಲಲಿತಾ ಅವರ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದ ವೇಳೆ ದೀಪಾ  ಎಂಜಿಆರ್ ಅಮ್ಮಾ ದೀಪಾ ಪೆರವೈ  ಎಂಬ ಪಕ್ಷ ಸ್ಥಾಪಿಸಿದ್ದರು. ಈ ವೇಳೆ ದೀಪಾ ಪತ ಮಾಧವನ್ ಕೂಡ ಜೊತೆಗಿದ್ದರು.

ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಧವನ್ ಪಕ್ಷ ತೊರೆದಿದ್ದು,ಹೊಸದೊಂದು ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದಾರೆ. ಪಕ್ಷದಲ್ಲಿರುವ ಕೆಲವು ಕೆಟ್ಟ ಶಕ್ತಿಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿರುವ ಅವರು, ದೀಪಾ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಯಲಲಿತಾ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ವಿಷಯ ತಿಳಿಸಿದ ಮಾಧವನ್ ಶೀಘ್ರವೇ ಅವರ ಹೊಸ ಪಕ್ಷದ ಹೆಸರನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com