ಉತ್ತರಪ್ರದೇಶ: ಗುಂಡಿಕ್ಕಿ ಬಿಎಸ್ಪಿ ಮುಖಂಡನ ಹತ್ಯೆ

ಶಸ್ತ್ರ ಸರ್ಜಿತ ಆಗಂತಕರಿಬ್ಬರು ಕಳೆದ ರಾತ್ರಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಮುಖಂಡ ಮೊಹಮ್ಮದ್ ಶಮಿ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ...
ಗುಂಡೇಟು
ಗುಂಡೇಟು
Updated on: 
ಅಲಹಾಬಾದ್: ಶಸ್ತ್ರ ಸರ್ಜಿತ ಆಗಂತಕರಿಬ್ಬರು ಕಳೆದ ರಾತ್ರಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಮುಖಂಡ ಮೊಹಮ್ಮದ್ ಶಮಿ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 
ಅಲಹಾಬಾದ್ ನ ಮೌವ್ ಐಮಾ ಎಂಬಲ್ಲಿ ಮೊಹಮ್ಮದ್ ಶಮಿ ಅವರ ಕಚೇರಿ ಬಳಿ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಆಗಂತಕರು ಶಮಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 
60 ವರ್ಷದ ಮೊಹಮ್ಮದ್ ಶಮಿ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ಸ್ಥಳೀಯರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು. 
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಈ ಶೂಟೌಟ್ ನಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com