ಯೋಧರ ಶಿರಚ್ಛೇದ ಮೂಲಕ ಪಾಕ್ ನೀಚ ಕೃತ್ಯ: ಸೇನೆಗೆ ಮುಕ್ತ ಹಸ್ತ ನೀಡಿದ ಕೇಂದ್ರ ಸರ್ಕಾರ

ಯೋಧರ ಶಿರಚ್ಛೇದ ಮಾಡುವ ಮೂಲಕ ಮತ್ತೆ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಹಸ್ತವನ್ನು ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಜಮ್ಮು: ಯೋಧರ ಶಿರಚ್ಛೇದ ಮಾಡುವ ಮೂಲಕ ಮತ್ತೆ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಹಸ್ತವನ್ನು ನೀಡಿದೆ.
ಯೋಧರ ಹತ್ಯೆಗೈದು ಗಡಿಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವಂತೆ ಯೋಧರಿಗೆ ಕೇಂದ್ರ ಸರ್ಕಾರ ಮುಕ್ತ ಹಸ್ತ ನೀಡುತ್ತಿದ್ದಂತೆಯೇ ಸಿಡಿದೆದ್ದ ಭಾರತೀಯ ಸೇನೆ, ಶತ್ರು ರಾಷ್ಟ್ರದ 2 ಸೇನಾ ಬಂಕರ್'ಗಳನ್ನು ಧ್ವಂಸಗೊಳಿಸಿ 7 ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ. 
ಪಾಕಿಸ್ತಾನದ ಕಿರ್ಪನ್ ಹಾಗೂ ಪಿಂಪರ್ ಪ್ರದೇಶದ ಎದುರಿರುವ ಎರಡು ಸೇನಾ ಬಂಕರ್ ಗಳನ್ನು ನಾಶಪಡಿಸಿರುವ ಸೇನೆ 7 ಯೋಧರನ್ನು ಹತ್ಯೆಗೈದಿದೆ ಎಂದು ತಿಳಿದುಬಂದಿದೆ. ಸೇನೆಯ ಈ ಕಾರ್ಯಾಚರಣೆ ಪಾಕಿಸ್ತಾನದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ನಾಶಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 
ಯೋಧರ ಹತ್ಯೆ ಬಳಿಕ ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿ ಸೇನಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಕೆಲವೇ ಗಂಟೆಗಳಲ್ಲಿ ಸೇನೆ ಈ ಕಾರ್ಯಾಚರಣೆಯನ್ನು ನಡೆಸಿದೆ. 
ಯೋಧರ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಸೇನಾ ಪಡೆಗೆ ಮುಕ್ತ ಹಸ್ತವನ್ನು ನೀಡಿದ್ದಾರೆ. ಭಾರತೀಯ ಯೋಧ ತ್ಯಾಗ ಹಾಗೂ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. 
ಯೋಧರ ಶಿರಚ್ಛೇದ ಅನಾಗರೀಕ ವರ್ತನೆಯಾಗಿದ್ದು, ಇದನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಭಾರತೀಯ ಸೇನಾ ಪಡೆ ಮೇಲೆ ಇಡೀ ದೇಶಕ್ಕೆ ಸಂಪೂರ್ಣ ನಂಬಿಕೆಯಿದೆ. ಯುದ್ಧದ ಸಂದರ್ಭದಲ್ಲಿಯೂ ಈ ರೀತಿಯ ಅನಾಗರೀಕ ವರ್ತನೆಗಳು ನಡೆದಿರಲಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com