ಈ ವೇಳೆ ಸ್ಥಳಕ್ಕೆ ಧಾವಿಸಿದ ಬಿಜೆಪಿ ಶಾಸಕ, ರಾಧಾ ಮೋಹನ್ ದಾಸ್ ಅಗರವಾಲ್ ಪೊಲೀಸರ ಕ್ರಮ ಖಂಡಿಸಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಜಾಯಿಷಿ ನೀಡಲು ಹೋದ ಚಾರು ನಿಗಮ್ ಅವರನ್ನು ಗದರಿದಿದ್ದಾರೆ. ಬಾಯಿ ಮುಚ್ಚಿಕೊಂಡಿರಿ, ಏನೂ ಹೇಳಲು ಬರಬೇಡಿ. ನಿಮ್ಮ ಇತಿ ಮಿತಿ ಮೀರಬೇಡಿ ಎಂದು ಬೆರಳು ತೋರುತ್ತಾ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ಗದರಿದ್ದಾರೆ. ಈ ವೇಳೆ ಶಾಸಕರಿಗೆ ಉತ್ತರ ನೀಡುತ್ತಾ ಅಕ್ಷರಶಃ ಅತ್ತಿದ್ದಾರೆ. ಕರ್ಚೀಫ್ ತೆಗೆದುಕೊಂಡು ಕಣ್ಣೀರು ಒರೆಸಿಕೊಂಡಿದ್ದಾರೆ.