ಅಫ್ಘಾನಿಸ್ತಾನ: ಐಎಸ್ ಉಗ್ರ ನಾಯಕನ ಹತ್ಯೆ

ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಹಾಗೂ ಅಫ್ಘಾನಿಸ್ತಾನ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಾಯಕ ಮೇತಪಟ್ಟಿದ್ದಾನೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಅಫ್ಘಾನಿಸ್ತಾನ ಐಎಸ್ ಉಗ್ರ ನಾಯಕನ ಹತ್ಯೆ
ಅಫ್ಘಾನಿಸ್ತಾನ ಐಎಸ್ ಉಗ್ರ ನಾಯಕನ ಹತ್ಯೆ
Updated on: 
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಹಾಗೂ ಅಫ್ಘಾನಿಸ್ತಾನ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಾಯಕ ಮೇತಪಟ್ಟಿದ್ದಾನೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 
ಏ.27 ರಂದು ಅಫ್ಘಾನಿಸ್ತಾನದ ನಂಗರ್ ಹರ್ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಅಮೆರಿಕಾ ಪಡೆಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಇಸ್ಲಾಮಿಕ್ ಸಂಘಟನೆಯ ಮುಖಂಡ ಅಬ್ದುಲ್ ಹಸೀಬ್ ಮೃತಪಟ್ಟಿದ್ದಾನೆ ಎಂದು ಅಫ್ಘಾನಿಸ್ತಾನ ಅಧಿಕೃತ ಪ್ರಕಟಣೆ ತಿಳಿಸಿದೆ. 
ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾ ಸೇನಾ ಪಡೆ ಸಹ ಐಎಸ್ ಉಗ್ರನ ಹತ್ಯೆಯನ್ನು ಖಚಿತಪಡಿಸಿದ್ದು, ಆತನೊಂದಿಗೆ ಇನ್ನು 35 ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ. ಮಾ.8 ರಂದು ಕಾಬೂಲ್ ನಲ್ಲಿ ನಡೆದ 50 ಜನರ ಹತ್ಯೆಗೆ ಐಎಸ್ ಉಗ್ರ ಸಂಘಟನೆಯ ಮುಖ್ಯಸ್ಥನೇ ಕಾರಣ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಆರೋಪಿಸಿದ್ದರು. 
ಅಬ್ದುಲ್ ಹಸೀಬ್ 9 ತಿಂಗಳ ಅವಧಿಯಲ್ಲಿ ಹತ್ಯೆಗೀಡಾಗಿರುವ 2 ನೇ ಐಎಸ್ ನಾಯಕನಾಗಿದ್ದಾನೆ ಎಂದು ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾ ಪಡೆ ಹಾಗೂ ನ್ಯಾಟೋ ಕಮಾಂಡರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com