ನವದೆಹಲಿ: ನಕ್ಸಲರನ್ನು ಮಟ್ಟ ಹಾಕಲು ಸಶಕ್ತ ಪಡೆ ಹಾಗೂ ಹೊಸ ತಂತ್ರಗಾರಿಕೆಯೊಂದಿಗೆ ದೇಶ ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಕ್ಸಲರ ಸಮಸ್ಯೆಯನ್ನು 'ಬೆಳ್ಳಿಯ ಬುಲೆಟ್' ಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಸೇರಿದಂತೆ ಹಲವು ರಾಜ್ಯಗಳ ಎಸ್ ಪಿಗಳು, ಅರೆಸೇನಾ ಪಡೆ, ಸೇರಿದಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಳೆದ 20 ವರ್ಷಗಳಲ್ಲಿ ನಕ್ಸಲರ ಹಿಂಸಾಚಾರಕ್ಕೆ ಸುಮಾರು 12 ಸಾವಿರ ಮಂದಿ ಬಲಿಯಾಗಿದ್ದಾರೆ ಎಂದು ರಾಜನಾಥ ಸಿಂಗ್ ಬೇಸರ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಬಂದೂಕು ತುದಿಯಿಂದ ಯಾವುದೇ ಅಭಿವೃದ್ಧಿ ಗೊಳಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.