ನವದಂಪತಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ, 7 ಸಾವು

ನವದಂಪತಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ಅಪಘಾತ
ಅಪಘಾತ
ಕಾಸರಗೋಡು: ನವದಂಪತಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 
ಕಾಸರಗೊಂಡಿನ ಕಯ್ಯಾರುವಿನಿಂದ ಕುಟುಂಬದವರು ವೆಲಂಕಣಿಗೆ ಯಾತ್ರೆಗೆಂದು ತೆರಳಿದ್ದರು. ಆದರೆ ಬೆಳಗ್ಗೆ ತಮಿಳುನಾಡಿನ ಕರೂರು ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. 
ಮೃತರು ನವದಂಪತಿಗಳಾದ ಅಲ್ವಿನ್ ಮೊಂತೆರೊ, ಪತ್ನಿ ಪ್ರಿಮಾ, ಅಲ್ವಿನ್ ಸಹೋದರ ಹೆರಾಲ್ಡ್, ಪತ್ನಿ ಪ್ರಸಿಲ್ಲಾ, ಕ್ಯಾಥರೀನ್, ಶೆರೋನ್ ಮತ್ತು ರೋಹಿತ್ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com