ಪೆಟ್ರೋಲ್‌ ಡೀಸೆಲ್ ದರದಲ್ಲಿ ಭಾರೀ ಇಳಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಈ ಇಳಿಕೆ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಈ ಇಳಿಕೆ ಮಾಡಲಾಗಿದೆ. ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇದು ಒಂದಷ್ಟು ನೆಮ್ಮದಿ ತರಲಿದೆ.
ಪೆಟ್ರೋಲ್‌ ದರ ಲೀಟರ್‌ಗೆ ರು. 2.16 ಮತ್ತು ಡೀಸೆಲ್‌ ದರ ರು 2.10 ಕಡಿಮೆಯಾಗಿದೆ.
ಸದ್ಯ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ ರು 70.04 ಹಾಗೂ ರು. 58.76 ಆಗಿದೆ. ಹಿಂದಿನ ದರ ರು. 73.01 ಹಾಗೂ ರು. 61.38 ಇತ್ತು.
ಈ ಹಿಂದೆ ಮೇ 1ರಂದು ಪೆಟ್ರೋಲ್ ಬೆಲೆಯಲ್ಲಿ ಎರಡು ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 52 ಪೈಸೆ ಏರಿಕೆಯಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ 16ರಂದು ಪೆಟ್ರೋಲ್ 1.39 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ರೂಪಾಯಿ 1.04 ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com