ದೆಹಲಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಬೇಧಿಸಿದ ಪೊಲೀಸರು, ಏಳು ಮಂದಿ ಬಂಧನ

ದೆಹಲಿ ಪೊಲೀಸರು ಶನಿವಾರ ರಾತ್ರಿ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಬೇಧಿಸಿದ್ದು, ಡಿಜಿಟಲ್ ಬೆಟ್ಟಿಂಗ್ ನಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿ ಪೊಲೀಸರು ಶನಿವಾರ ರಾತ್ರಿ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಬೇಧಿಸಿದ್ದು, ಡಿಜಿಟಲ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ಈಶಾನ್ಯ ದೆಹಲಿಯ ಅಶೋಕ್ ವಿಹಾರನ ರೆಸ್ಟೊರೆಂಟ್ ವೊಂದರ ಮೇಲೆ ನಿನ್ನೆ ರಾತ್ರಿ ದಾಳಿ ನಡೆಸಿದ ಪೊಲೀಸರು, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸ್ಟೊರೆಂಟ್ ವ್ಯವಸ್ಥಾಪಕ ಹಾಗೂ ಆರು ಬುಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈಶಾನ್ಯ ವಲಯ ಉಪ ಪೊಲೀಸ್ ಆಯುಕ್ತ ಮಿಲಿಂದ್ ಮಹದಿಯೋ ದುಂಬೆರೆ ಅವರು ಹೇಳಿದ್ದಾರೆ.
ಬಂಧಿತ ಬುಕ್ಕಿಗಳಿಂದ ಎಂಟು ಮೊಬೈಲ್ ಫೋನ್, ಒಂದು ಟಿವಿ ಸೆಟ್, ಐಪಿಎಲ್ ಪಂದ್ಯಗಳ ಮೇಲಿನ ಬೆಟ್ಟಿಂಗ್ ಮಾಹಿತಿ ದಾಖಲಿಸಿದ್ದ ರೆಜಿಸ್ಟರ್, ಡಿವಿಆರ್, ಹಾಗೂ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com