ಜಾರ್ಖಂಡ್ : ಹಜಾರಿಬಾಗ್ ರೈಲು ನಿಲ್ದಾಣದಲ್ಲಿ ಅವಳಿ ಸ್ಫೋಟ

ಕಳೆದ ರಾತ್ರಿ ಜಾರ್ಖಂಡ್ ನ ಹಜರಿಬಾಗ್ ರೈಲ್ವೆ ನಿಲ್ದಾಣದಲ್ಲಿ ಅವಳಿ ಸ್ಫೋಟ ಸಂಭವಿಸಿದ್ದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗಿರಿದಿಹ್(ಜಾರ್ಖಂಡ್): ಕಳೆದ ರಾತ್ರಿ ಜಾರ್ಖಂಡ್ ನ ಹಜರಿಬಾಗ್ ರೈಲ್ವೆ ನಿಲ್ದಾಣದಲ್ಲಿ ಅವಳಿ ಸ್ಫೋಟ ಸಂಭವಿಸಿದ್ದರಿಂದ ಆತಂಕದ ಮತ್ತು ಉದ್ವಿಗ್ನ ವಾತಾವರಣ ಉಂಟಾಯಿತು.
ಸ್ಫೋಟದಿಂದ ಬಾಲಕನೊಬ್ಬನ ಬಲಗೈ ಸುಟ್ಟುಹೋಗಿದ್ದು ದನ್ ಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಸ್ಫೋಟಕ್ಕೆ ಯಾವ ವಸ್ತು ಬಳಸಲಾಯಿತು ಎಂಬ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಸ್ಫೋಟಕ್ಕೆ ಕಾರಣವಾದ ವಸ್ತುವನ್ನು ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಸುತ್ತಿ ಎಸೆಯಲಾಗಿತ್ತು.
ಬಾಂಬ್ ಸ್ಫೋಟಗೊಂಡ ರೈಲ್ವೆ ನಿಲ್ದಾಣದ ಮೂಲಕ ದೆಹಲಿಯಿಂದ ಕೋಲ್ಕತ್ತಾಗೆ ಹೋಗುವ ರೈಲುಗಳು ಸಂಚರಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com