ರಕ್ಷಣಾ ಕಾರ್ಯದರ್ಶಿಯಾಗಿ ಸಂಜಯ್ ಮಿತ್ರ ಅಧಿಕಾರ ಸ್ವೀಕಾರ

ರಕ್ಷಣಾ ಕಾರ್ಯದರ್ಶಿಯಾಗಿ ಸಂಜಯ್ ಮಿತ್ರ ಮೇ.25 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಸಂಜಯ್ ಮಿತ್ರ
ಸಂಜಯ್ ಮಿತ್ರ
ನವದೆಹಲಿ: ರಕ್ಷಣಾ ಕಾರ್ಯದರ್ಶಿಯಾಗಿ ಸಂಜಯ್ ಮಿತ್ರ ಮೇ.25 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. 
ಜಿ.ಮೋಹನ್ ಕುಮಾರ್ ಅವರಿಂದ ತೆರವುಗೊಂಡಿದ್ದ ಹುದ್ದೆಗೆ ಸಂಜಯ್ ಮಿತ್ರ ಮೇ.10 ರಂದು ನೇಮಕಗೊಂಡಿದ್ದರು. 1982 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಮಿತ್ರ ಈ ಹಿಂದೆ ರಸ್ತೆ ಮತ್ತು ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೇ.10 ರಂದು ಸಂಜಯ್ ಮಿತ್ರ ಅವರನ್ನು ರಕ್ಷಣಾ ಇಲಾಖೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. 
ಮೇ.25 ರಂದು ಅಧಿಕಾರ ವಹಿಸಿಕೊಂಡಿರುವ ಸಂಜಯ್ ಮಿತ್ರ 2 ವರ್ಷಗಳ ವರೆಗೆ ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com