ಭೀಕರ ರಸ್ತೆ ಅಪಘಾತದಲ್ಲಿ ಸಂಸದ ರಾಮ್ ಕಿಶೋರ್ ಪುತ್ರ ಸಾವು

ಬಿಹಾರದ ಸಂಸದ ರಾಮ್ ಕಿಶೋರ್ ಸಿಂಗ್ ಪುತ್ರ ರಾಜೀವ್ ಪ್ರತಾಪ್ ಸಿಂಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ...
ಅಪಘಾತ
ಅಪಘಾತ
Updated on: 
ಅಲಹಾಬಾದ್: ಬಿಹಾರದ ಸಂಸದ ರಾಮ್ ಕಿಶೋರ್ ಸಿಂಗ್ ಪುತ್ರ ರಾಜೀವ್ ಪ್ರತಾಪ್ ಸಿಂಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 
ಉತ್ತರ ಪ್ರದೇಶದ ಅಲಹಾಬಾದ್ ಹೊರವಲಯದಲ್ಲಿರುವ ಹೆದ್ದಾರಿಯಲ್ಲಿ ಹೋಂಡಾ ಸಿಟಿ ಕಾರಿನಲ್ಲಿ ರಾಜೀವ್ ಪ್ರತಾಪ್ ಒಬ್ಬರೇ ಪ್ರಯಾಣಿಸುತ್ತಿದ್ದು ಈ ವೇಳೆ ಟ್ರಕ್ ಗೆ ರಾಜೀವ್ ಕಾರು ಡಿಕ್ಕಿ ಹೊಡೆದಿದ್ದು ಈ ದುರ್ಘಟನೆ ಸಂಭವಿಸಿದೆ. 
ಅಪಘಾತ ಸಂಭವಿಸಿದ ಕೂಡಲೇ ರಾಜೀವ್ ಪ್ರತಾಪ್ ರನ್ನು ಸ್ಥಳೀಯರು ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲಾಗಲೇ ರಾಜೀವ್ ಅಸುನೀಗಿದ್ದರು. 
ಸಂಸದ ರಾಮ್ ಕಿಶೋರ್ ಸಿಂಗ್ ಎಲ್ ಜೆಪಿ ಪಕ್ಷದವರಾಗದ್ದು ಬಿಹಾರ ವೈಶಾಲಿ ಕ್ಷೇತ್ರದ ಸಂಸದರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com