ಕುಶಿನಗರ್(ಉತ್ತರ ಪ್ರದೇಶ): ಅತ್ಯಾಚಾರದಂತಹ ದೌರ್ಜನ್ಯ ಅಪರಾಧವನ್ನೆಸಗಿ ಜೈಲು ಪಾಲಾಗಿದ್ದ ಯುವಕನೊಬ್ಬ ಜಾಮೀನು ಸಿಕ್ಕಿದ ನಂತರ ನೇರವಾಗಿ ನೊಂದ ಯುವತಿ ಮನೆಗೆ ಹೋಗಿ ಮುಂದೆ ಘೋರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆಯೊಡ್ಡಿ ಬಂದ ಘಟನೆ ನಡೆದಿದೆ.
ಆರೋಪಿ 2016ರಲ್ಲಿ ಬಂಧಿತನಾಗಿದ್ದು ಈ ವರ್ಷ ಮಾರ್ಚ್ ನಲ್ಲಿ ಜಾಮೀನು ಮೇಲೆ ಹೊರಬಂದಿದ್ದ. ನಂತರ ನಿರಂತರವಾಗಿ ನೊಂದ ಯುವತಿ ಮನೆಯವರಿಗೆ ಬೆದರಿಕೆ ಹಾಕುತ್ತಲೇ ಇದ್ದ. ಭಯಗೊಂಡ ಮನೆಯವರು ಮುಂದೆ ಯಾವುದೇ ಅಪಾಯ ಬಾರದಂತೆ ಸಂಬಂಧಿಕರ ಮನೆಗೆ ಯುವತಿಯನ್ನು ಕಳುಹಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದಕ್ಕೆ ಅವರು ಯಾವುದೇ ವಿಚಾರಣೆಗೆ ಬಂದಿಲ್ಲ. ಹೀಗಾಗಿ ನೊಂದ ಯುವತಿಯ ಮನೆಯವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಆದರೆ ಪೊಲೀಸರು, ಈ ವಿಷಯದಲ್ಲಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದು, ಯುವತಿ ಮತ್ತು ಆಕೆಯ ಮನೆಯವರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಹೇಳಿದ್ದಾರೆ.