ಎಲ್ ಪಿಜಿ ಸಿಲಿಂಡರ್ ಸ್ಫೋಟ: ಮಹಿಳೆ, ಇಬ್ಬರು ಮಕ್ಕಳ ಸಜೀವ ದಹನ

ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳು ಸಜೀವ ದಹನವಾಗಿರುವ ಘಟನೆ ತ್ರಿಪುರದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಗರ್ತಲಾ: ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳು ಸಜೀವ ದಹನವಾಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.
ತ್ರಿಪುರಾದಿಂದ 110 ಕಿಮೀ ದೂರವಿರುವ ಹೃಶ್ಯಮುಕ್ ನಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ.
ಜುನು ಎಂಬ ಸಣ್ಣ ವ್ಯಾಪಾರಿ  ಅಕ್ರಮವಾಗಿ ಪೆಟ್ರೋಲ್ ಸಂಗ್ರಹಿಸಿ ಮನೆಯಲ್ಲಿಟ್ಟ.  ಡಬ್ಬಿಗೆ ಪೆಟ್ರೋಲ್ ತುಂಬುವಾಗ ಪಕ್ಕದಲ್ಲೇ ಇದ್ದೆ ಲ್ಯಾಂಪ್ ನ ಬೆಂಕಿಗೆ ಇಂಧನ ಸೋಕಿದೆ ಈ ವೇಳೆ ಹರಡಿದ ಬೆಂಕಿ ಸಿಲಿಂಡರ್ ತಾಕಿ ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿ ಹಂರಡದಂತೆ ತೆಡಯಲು ಜುನು ಪ್ರಯತ್ನಿಸಿದ್ದಾನೆ, ಆದರೆ ದುರಂತದಲ್ಲಿ  ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com