ಭಾರತೀಯ ಸೇನೆ ಸೇರಲಿದೆ ಕರ್ನಾಟಕದ ಮಧೋಳ ಶ್ವಾನ!

Published On :
ಡೆಹರಾಡೂನ್: ಬೇಟೆಗೆ ಹೆಸರಾದ ಕರ್ನಾಟಕದ ಮುಧೋಳದ ನಾಯಿಗಳು ಇದೀಗ ಭಾರತೀಯ ಸೇನೆ ಸೇರಲು ಸಿದ್ದವಾಗಿವೆ.
ಜರ್ಮನ್ ಶೆಫರ್ಡ್, ಲ್ಯಾಬ್ರಡೋರ್ಸ್ ಮತ್ತು ಗ್ರೇಟ್ ಸ್ವಿಸ್ಟೆ ಮೌಂಟೇನ್ ಇಂತಹಾ ವಿದೇಶೀ ತಳಿಗಳೇ ತುಂಬಿರುವ ಭಾರತೀಯ ಸೈನ್ಯಕ್ಕೀಗ ಇದೇ ಮೊದಲ ಬಾರಿ ದೇಶಿಯ ಶ್ವಾನ ತಳಿ ಸೇರ್ಪಡೆಯಾಗುತ್ತಿರುವುದು ವಿಶೇಷ. ಅದರಲ್ಲಿಯೂ ಕರ್ನಾಟಕದ ಜನರ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.
ಪ್ರಾರಂಭದಲ್ಲಿ 6 ಮುಧೋಳ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು ಅವು ಈ ವರ್ಷದ ಅಂತ್ಯದ ವೇಳೆಗ್ ಸೈನ್ಯಕ್ಕೆ ಸೇರಲಿವೆ. ಭಯೋತ್ಪಾದಕರ ಉಪಟಳ ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ನಡೆಯುವ ಸೇನಾ ಕಾರ್ಯಾಚರಣೆಯಲ್ಲಿ ಇವು ಭಾಗವಹಿಸಲಿವೆ.
ಕರ್ನಾಟಕದಿಂದ ಈ ಆರು ಮಧೋಳ ತಳಿಯ ನಾಯಿಗಳನ್ನು ಆರ್ವಿಸಿ ಕೇಂದ್ರಕ್ಕೆ ತರಬೇತಿಗಾಗಿ ಕಳುಹಿಸಲಾಗಿತ್ತು.
ಮಧೋಳ ನಾಯಿ-ಒಂದು ಪರಿಚಯ
ಸಾವಿರಾರು ವರ್ಷಗಳ ಹಿಂದೆಯೇ ಕರ್ನಾಟಕದವರಿಗೆ ಮಧೋಲ ನಾಯಿ ತಳಿ ಪರಿಚಯವಿತ್ತು. ಅರೇಬಿಯಾ, ಮದ್ಯ ಏಷ್ಯಾದಿಂದ ಈ ನಾಯಿ ಭಾರತಕ್ಕೆ ಬಂದಿತ್ತು. ಮಧೋಳದ ರಾಜ ಮಾಲೋಜಿ ರಾವ್ ಘೋರ್ಪಡೆ ಪ್ರೀತಿ ಇಅದಕ್ಕೆ ಸಿಕ್ಕಿತ್ತು. ಅಲ್ಲದೆ ಆತ ಒಂದು ಜೊತೆ ಮಧೋಳ ನಾಯಿಗಳನ್ನು ಬ್ರಿಟನ್ ದೊರೆ ಐದನೇ ಜಾರ್ಜ್ ಗೆ ಉಡುಗೊರೆಯಾಗಿ ನೀಡಿದ್ದನು.ಹಲಗಲಿಯ ಬೇಡರು ಬೇಟೆಗಾಗಿ ಈ ನಾಯಿಗಳನ್ನು ಬಳಸಿದ್ದರು.
ಈ ತಳಿಯ ನಾಯಿಗಳು ಸುಮಾರು 13, 14 ವರ್ಷಗಳ ಕಾಲ ಬದುಕುತ್ತವೆ. ಒಟ್ಟು 18 ತಿಂಗಳಲ್ಲಿ ಈ ನಾಯಿ ಪೂರ್ಣ ಬೆಳವಣಿಗೆ ಕಾಣುತ್ತದೆ. ನಾಯಿಯ ಒಟ್ಟು ಮೈಕಟ್ಟು 1.8 ರಿಂದ 2.3 ಅಡಿಗಳಷ್ಟು ಇರುತ್ತದೆ. ಈಗಲೂ ಮಧೋಲದ ಸುಮಾರು 750ಕುಟುಂಬಗಳು ಈ ನಾಯಿಯನ್ನು ಸಾಕಿ ಮಾರಾಟ ಮಾಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


