ಪಾಕಿಸ್ತಾನ ಮೂಲದ ಫಾತಿಮಾ ಹಾಗೂ ಮುಮ್ತಾಜ್ ಎಂಬ ಇಬ್ಬರು ಸಹೋದರಿಯರನ್ನು 2006ರಲ್ಲಿ ಅಟ್ಟಾರಿ ರೈಲ್ವೇ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಇಬ್ಬರು ಸಹೋದರಿಯರು ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು.
ಬಂಧನದ ವೇಳೆ ಇಬ್ಬರ ಬಳಿ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಬಳಿಕ ಇಬ್ಬರು ಮಹಿಳೆಯರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನಲೆಯಲ್ಲಿ ಇಬ್ಬರಿಗೂ ತಲಾ ರೂ.2 ಲಕ್ಷ ದಂಡ ವಿಧಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ದಂಡ ವಿಧಿಸಲು ವಿಫಲರಾದರೆ ಜೈಲು ಶಿಕ್ಷೆ ಮುಂದುವರೆಯಲಿದೆ ಎಂದು ತಿಳಿಸಿದ್ದರು. ಬಂಧನಕ್ಕೊಳಗಾದಾಗ ಫಾತಿಮಾ ತುಂಬು ಗರ್ಭಿಣಿಯಾಗಿದ್ದಳು. ಜೈಲಿನಲ್ಲೇ ಹೀನಾ ಎಂಬ ಹೆಸರಿನ ಮಗುವಗೆ ಜನ್ಮ ನೀಡಿದ್ದರು. ಆ ಹೆಣ್ಣು ಮಗುವಿಗೆ ಇದೀಗ ಹತ್ತು ವರ್ಷವಾಗಿದೆ.
ಇದೀಗ ಇಬ್ಬರೂ ಸಹೋದರಿಯರ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದು, ಇಬ್ಬರೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇಬ್ಬರು ಸಹೋದರಿಯರು ಪ್ರಧಾನಮಂತ್ರಿ ನರೇಂದ್ರ ಮೋದಿ, ವಕೀಲ ನವಜೋತ್ ಜಿ ಹಾಗೂ ತಮಗೆ ಸಹಾಯ ಮಾಡಿದ ಪ್ರತೀಯೊಬ್ಬರಿಗೂ ಸೆಲ್ಯೂಟ್ ಹೊಡೆದಿದ್ದಾರೆ. ಅಲ್ಲದೆ, ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯರು ಶೀಘ್ರದಲ್ಲಿಯೇ ಬಿಡುಗಡೆಗೊಂಡು ತಾಯಿನಾಡು ಸೇರಲಿ ಎಂದು ಹೇಳಿದ್ದಾರೆ.
ಬಿಡುಗಡೆಗೊಂಡಿರುವ ಇಬ್ಬರು ಪಾಕಿಸ್ತಾನದ ಮೂಲದ ಸಹೋದರಿಯರು ಅಟ್ಟಾರಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
ಮೊದಲ ಬಾರಿಗೆ ತಾಯ್ನಾಡಿಗೆ ಭೇಟಿ ನೀಡುತ್ತಿರುವ ಹೀನಾ, ತನ್ನ ಅಪ್ಪನ್ನು ನೋಡಲು ಕಾತುರಳಾಗಿದ್ದೇನೆಂದು ಹೇಳಿಕೊಂಡಿದ್ದಾರೆ.
ದೀರ್ಘಕಾಲಿಕ ಹೋರಾಟಕ್ಕೆ ಪುಟ್ಟ ಬಾಲಕಿ ಹೀನಾಳೆ ಕಾರಣ. ಯಾವುದೇ ತಪ್ಪು ಮಾಡದ ಪುಟ್ಟ ಬಾಲಕಿ ಶಿಕ್ಷೆ ಅನುಭವಿಸುತ್ತಿರುವುದು ಬಹಳ ನೋವನ್ನು ತಂದಿದ್ದು. ಸಾಕಷ್ಟು ಹೋರಾಟದ ಬಳಿಕ ಇಬ್ಬರೂ ಸಹೋದರಿಯರು ಬಿಡುಗಡೆಗೊಂಡಿದ್ದು, ಇಂದು ನನಗೆ ದೀಪಾವಳಿ ಹಬ್ಬ ಎಂದು ವಕೀಲೆ ನವಜೋತ್ ಕೌರ್ ಛಬಾ ಹೇಳಿದ್ದಾರೆ.
ಬಾಲಕಿ ಹೀನಾ ಕುರಿತಂತೆ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದೆ. ಇಬ್ಬರ ಬಿಡುಗಡೆಗೆ ಭಾರತ ಸರ್ಕಾರ ಮಧ್ಯೆ ಪ್ರವೇಶ ಮಾಡಿತ್ತು. ಇದೀಗ ಹೀನಾ ತನ್ನ ತಾಯ್ನಾಡಿಗೆ ಹೋಗುತ್ತಿದ್ದು. ತಂದೆಯನ್ನು ಭೇಟಿ ಮಾಡಲು ಕಾತುರಳಾಗಿದ್ದಾಳೆಂದು ತಿಳಿಸಿದ್ದಾರೆ.