ದೇಶ

ರಸ್ತೆಯ ಮೇಲೆ ಒಂದೇ ಒಂದು ನ್ಯಾನೋ ಕಾರು ಕಂಡಿಲ್ಲ: ಗುಜರಾತ್ ಮಾದರಿ ಬಗ್ಗೆ ರಾಹುಲ್ ಲೇವಡಿ

ರಸ್ತೆಯ ಮೇಲೆ ಒಂದೇ ಒಂದು ನ್ಯಾನೋ ಕಾರು ಕಂಡಿಲ್ಲ: ಗುಜರಾತ್ ಮಾದರಿ ಬಗ್ಗೆ ರಾಹುಲ್ ಲೇವಡಿ
ರಾಹುಲ್ ಗಾಂಧಿ
Published On :
ಗುಜರಾತ್: ಟಾಟಾ ನ್ಯಾನೋ ಯೋಜನೆಗೆ ಗುಜರಾತ್ ಸರ್ಕಾರ 33 ಸಾವಿರ ಕೋಟಿ ನೀಡಿದೆ, ಆದರೆ ಕಳೆದ 10-15 ದಿನಗಳಿಂದ ಗುಜರಾತ್ ರಸ್ತೆಗಳ ಮೇಲೆ ನಾನು ಒಂದೇ ಒಂದು ನ್ಯಾನೋ ಕಾರು ಕಂಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.  
ಗುಜರಾತ್ ನ ಪರ್ದಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಗುಜರಾತ್ ಮಾದರಿ ಬಗ್ಗೆ ಲೇವಡಿ ಮಾಡಿದ್ದಾರೆ. ರೈತರಿಂದ ಜಮೀನು ಕಸಿದುಕೊಳ್ಳಿ, ಅದನ್ನು ಉದ್ಯಮಿಗಳಿಗೆ ನೀಡಿ, ನೀರು, ವಿದ್ಯುತ್ ಕೊಡಿ, ಅವರು ಮಾತ್ರ ನಿಮಗೆ ವಾಪಸ್ ಏನನ್ನೂ ಕೊಡುವುದಿಲ್ಲ, ಇದೇ ಗುಜರಾತ್ ಮಾದರಿ ಅಭಿವೃದ್ಧಿ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಭರವಸೆ ನೀಡಿದ್ದರು, ಆದರೆ ಕೇವಲ 1ಲಕ್ಷ ಜನರಿಗೆ ಉದ್ಯೋಗ ಒದಗಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ಗುಜರಾತ್ ನಲ್ಲಿ ಪಾಂಡವ ಮತ್ತು ಕೌರವರ ನಡುವೆ ಯುದ್ದ ನಡೆಯಲಿದೆ. ಇದು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುವ ಯುದ್ದವಾಗಿದೆ. ಬಿಜೆಪಿ ಕೌರವರಿದ್ದಂತೆ ಅವರ ಬಳಿ ದೊಡ್ಡ ಸೈನ್ಯವಿದೆ, ಆದರೆ ಕಾಂಗ್ರೆಸ್ ಪಾಂಡವರಿದ್ದಂತೆ, ಅವರ ಬಳಿ  ಕೇವಲ ಸತ್ಯ ಮಾತ್ರ ಇದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.