ಒಟ್ಟಾರೆ ಸಮೀಕ್ಷೆಯಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಕೇಂದ್ರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವುದು ಕಂಡುಬಂದಿದೆ. ಆದರೆ ಕರ್ನಾಟಕ, ತೆಲಂಗಾಣ ಮತ್ತು ಆಂದ್ರ ಪ್ರದೇಶದ ಜನರು ಅಪನಗದೀಕರಣವನ್ನು ಬೆಂಬಲಿಸಿದ್ದಾರೆ ಆದರೂ ಪ್ರಧಾನಿ ಮೋದಿ ಇದರ ಉದ್ದೇಶ ಸಾಧನೆಯಲ್ಲಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಪನಗದೀಕರಣದ ಪರಿಣಾಮ ಹೆಚ್ಚು ತೊಂದರೆಗೆ ಒಳಗಾಗಿದ್ದು ಮದ್ಯಮ ವರ್ಗದ ಜನರೆನ್ನುವುದು ಎಲ್ಲಾ ಐದು ರಾಜ್ಯಗಳ ಏಕಾಭಿಪ್ರಾಯವಾಗಿದೆ. ಇಅದು ರಾಜ್ಯಗಳ ಕನಿಷ್ಠ ಶೇ.40 ರಷ್ಟು ಮದ್ಯಮ ವರ್ಗದವರು `500 ಮತ್ತು `1,000 ಮುಖಬೆಲೆಯ ನೊಟಿನ ರದ್ದತಿಯಿಂದ ತೊಂದರೆಗೊಳಗಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.