ವೃದ್ಧರು, ವಯಸ್ಕರು ಸೇರಿದಂತೆ ಮತದಾರರು ಉತ್ಸಾಹದಿಂದ ಬೆಳಗ್ಗೆಯಿಂದಲೇ ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನದ ವೇಳೆ ಯಾವುದೇ ಘರ್ಷಣೆ ಮತ್ತು ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 11,500 ಪೊಲೀಸ್ ಯೋಧರನ್ನು, 6,400 ಮಂದಿ ಗೃಹ ರಕ್ಷಕರನ್ನು, 65 ಪಾರಾ ಮಿಲಿಟರಿ ತುಕಡಿಗಳನ್ನು ರಾಜ್ಯದಾದ್ಯಂತ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗಿದೆ.