ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಆಗಿದ್ದೂ ಮೋದಿಯಿಂದಾಗಿ: ಶಿವ ಸೇನೆ ವ್ಯಂಗ್ಯ

ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ಶಿವಸೇನೆ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ....
ನರೇಂದ್ರ ಮೋದಿ-ಮಾನುಷಿ ಚಿಲ್ಲರ್
ನರೇಂದ್ರ ಮೋದಿ-ಮಾನುಷಿ ಚಿಲ್ಲರ್
ಮುಂಬೈ: ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ಶಿವಸೇನೆ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಪ್ರಶಸ್ತಿ ಗೆದ್ದಿರುವುದು ತಮ್ಮಿಂದಾಗಿ ಎಂದು ಏಕೆ ಯಾವೊಬ್ಬ ಬಿಜೆಪಿ ನಾಯಕರು ಹೇಳುತ್ತಿಲ್ಲ ಎಂದು ವ್ಯಂಗ್ಯವಾಗಿ ಕೇಳಿದೆ.
17 ವರ್ಷಗಳ ನಂತರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದು ಹರ್ಯಾಣ ಮೂಲದ ಮಾನುಷಿ ಚಿಲ್ಲರ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ದೇವರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಬಿಜೆಪಿಯ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಸಾಧ್ಯವಾಯಿತು ಎಂದು ವ್ಯಂಗ್ಯವಾಗಿ ಅದರ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.
ಆದರೆ ಇದುವರೆಗೆ ಬಿಜೆಪಿಯ ಯಾವೊಬ್ಬ ನಾಯಕರು ಕೂಡ ತಮ್ಮಿಂದಾಗಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಪಟ್ಟ ಪಡೆದುಕೊಂಡಳು ಎಂದು ಹೇಳದಿರುವುದು, ಅದರ ಕ್ರೆಡಿಟ್ ಪಡೆದುಕೊಳ್ಳಲು ಮುಂದೆ ಬಾರದಿರುವುದು ಆಶ್ಚರ್ಯವೇ ಸರಿ ಎಂದು ಅಣಕಿಸಿದೆ.
ಮಾನುಷಿ  ಉಪನಾಮ ಚಿಲ್ಲರ್ ಎಂದಿದೆ. ಹಾಗಾಗಿ ಇದು ಮೋದಿಯವರ ನೋಟುಗಳ ಅನಾಣ್ಯೀಕರಣ ನೀತಿಯಿಂದಾಗಿ ಗೆದ್ದಿದ್ದಾರೆ. 500, 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ನಂತರ ಜನರ ಬಳಿಯಲ್ಲಿ ಚಿಲ್ಲರೆ ಮಾತ್ರ ಉಳಿದಿದೆ. ಹೀಗಾಗಿ ಮಾನುಷಿ ವಿಶ್ವ ಸುಂದರಿಯಾಗಿ ಗೆದ್ದಿದ್ದಾರೆ ಎಂದು ವ್ಯಂಗ್ಯವಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com