ಮಧ್ಯ ರಾತ್ರಿ ನಟ ಪರೇಶ್ ರಾವಲ್ ಟ್ವಿಟರ್ ಹೈಡ್ರಾಮಾ, ರಾಹುಲ್ ಕುರಿತು ಟ್ವೀಟ್ ಮಾಡಿ ಬಳಿಕ ಕ್ಷಮೆ!

ಬಿಜೆಪಿ ಮುಖಂಡ ಹಾಗೂ ಖ್ಯಾತ ಬಾಲಿವುಡ್ ನಟ ಪರೇಶ್ ರಾವಲ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೆಗಳುವ ಭರದಲ್ಲಿ ಯಟವಟ್ಟು ಮಾಡಿಕೊಂಡು ಬಳಿಕ ಕ್ಷಮೆ ಯಾಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಬಿಜೆಪಿ ಮುಖಂಡ ಹಾಗೂ ಖ್ಯಾತ ಬಾಲಿವುಡ್ ನಟ ಪರೇಶ್ ರಾವಲ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೆಗಳುವ ಭರದಲ್ಲಿ ಯಟವಟ್ಟು ಮಾಡಿಕೊಂಡು ಬಳಿಕ ಕ್ಷಮೆ ಯಾಚಿಸಿದ್ದಾರೆ.
ಮಧ್ಯರಾತ್ರಿ ಕಾಂಗ್ರೆಸ್ ಪಕ್ಷದ ಮ್ಯಾಗಜಿನ್ ಯುವ ದೇಶ್ ನಲ್ಲಿ ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ತೆರೆಸಾ ಮೇ ಅವರ ಚಿತ್ರವನ್ನು ಪ್ರಕಟಿಸಿ, ನಮ್ಮ ಪ್ರಧಾನಿ ಟೀ ಕೊಡುವುದಕ್ಕೇ ಸೀಮಿತವಾಗಬಾರದು  ಎಂದು ವ್ಯಂಗ್ಯಾತ್ಮಕವಾಗಿ ಚಿತ್ರ ಪ್ರಕಟಿಸಿತ್ತು.. ಇದನ್ನು ಟೀಕಿಸುವ ಭರದಲ್ಲಿ ನಟ ಪರೇಶ್ ರಾವಲ್ ನಮ್ಮ ಚಾಯ್ ವಾಲಾ ಪ್ರವಾಸಿ "ಬಾರ್ ವಾಲಾ"ಗಿಂತ ತುಂಬಾ ಉತ್ತಮ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್  ಪಕ್ಷದಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪರೇಶ್ ರಾವಲ್ ಆ ವಿವಾದಾತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಅಲ್ಲದೆ ಭಾವನೆಗಳ ನೋಯಿಸಿದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com