ಬಿಹಾರದಲ್ಲಿ ಪ್ರಧಾನಿ ಮೋದಿ ಕತ್ತು ಮತ್ತು ಕೈ ಕತ್ತರಿಸಲು ಹಲವರು ಸಿದ್ಧರಿದ್ದಾರೆ: ರಾಬ್ರಿ ದೇವಿ

ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕತ್ತು ಮತ್ತು ಕೈ ಕತ್ತರಿಸಲು ಹಲವು ಜನ ಸಿದ್ಧರಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ....
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ಪಾಟ್ನಾ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕತ್ತು ಮತ್ತು ಕೈ ಕತ್ತರಿಸಲು ಹಲವು ಜನ ಸಿದ್ಧರಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪತ್ನಿ ರಾಬ್ರಿ ದೇವಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಸಾರ್ಜಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಬ್ರಿ ದೇವಿ, ಅವರು ಮೋದಿ ವಿರುದ್ಧ ಆರೋಪ ಮಾಡುವವರ ಬೆರಳು ಕತ್ತರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಹಾಗೆ ಮಾಡಿದರೆ ದೇಶದ ಜನ ಸುಮ್ಮನಿರಲ್ಲ. ಬಿಹಾರದಲ್ಲಿ ಹಲವು ಜನ ಪ್ರಧಾನಿ ಮೋದಿಯ ಕತ್ತು ಮತ್ತು ಕೈ ಕತ್ತರಿಸಲು ಸಿದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಬೆರಳು ತೋರಿಸುವವರ ಬೆರಳು ಅಥವಾ ಕೈಗಳನ್ನು ಕತ್ತರಿಸಬೇಕು ಅಥವಾ ಮುರಿಯಬೇಕು ಎಂಬ ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಅವರಿಗೆ ತಿರುಗೇಟು ನೀಡಿದ್ದಾರೆ. 
ಪ್ರಧಾನಿ ಮೋದಿ ಕತ್ತು ಅಥವಾ ಕೈ ಕತ್ತರಿಸುವವರನ್ನು ಅವರು ಜೈಲಿಗೆ ಕಳುಹಿಸುತ್ತಾರೆ. ಹಾಗ ಬಿಹಾರ ಜನತೆ ಒಟ್ಟಿಗೆ ಜೈಲಿಗೆ ಹೋಗಲಿದ್ದಾರೆ ಎಂದರು.
ಕಳೆದ ಸೋಮವಾರ ಸಮಾರಂಭವೊಂದರಲ್ಲಿ ಮಾತನಾಡಿದ್ದ ನಿತ್ಯಾನಂದ ರಾಯ್, ಬಡ ಕುಟುಂಬದಿಂದ ಬಂದಿರುವ ಪ್ರಧಾನಿ ಮೋದಿ ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅವರ ವಿರುದ್ಧ ಬೊಟ್ಟು ಮಾಡುವ ಕೈಗಳನ್ನು ಕತ್ತರಿಸಬೇಕು ಅಥವಾ ಮುರಿಯಬೇಕು ಎಂದಿದ್ದರು. ರಾಯ್ ಅವರ ಈ ಹೇಳಿಕೆಗೆ ತೀವ್ರ ವಿರೋಧ ಮತ್ತು ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ತಮ್ಮ ವಿವಾದಾತ್ಮಕ ಹೇಳಿಕೆಗೆ ವಿಷಾದಿಸಿದ್ದಾರೆ. ಜತೆಗೆ ಹೇಳಿಕೆಯನ್ನು ಹಿಂಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com