ಲಖ್ನೋ: ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ನೈನಿ ಜಂಕ್ಷನ್ ಬಳಿ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿನಡಿ ಸಿಕ್ಕು ಮೂವರು ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಹಳಿ ದಾಟುತ್ತಿದ್ದ ಸಮಯದಲ್ಲಿ ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ ನಡಿ ಸಿಕ್ಕು ಅವರು ಮೃತರಾದರೆಂದು ಪೋಲೀಸರು ತಿಳಿಸಿದ್ದಾರೆ.
ಬೆಳೆಗ್ಗೆ ಸುಮಾರು 3:30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂಡು ಪೋಲೀಸರು ಹೇಳಿದ್ದಾರೆ.
ಮೃತರನ್ನು ಚಂಕಾ ನಿವಾಸಿ ರಾಮ್ ಬಂಧೂರ್ ಪತ್ನಿ ಸುಶಿಲಾ ದೇವಿ (46), ಮಗಳು ಶೀಲು ಲತಾ(15) ಸಂಬಂಧಿಗಳಾದ ಬ್ರಿಜ್ ಕಲಿ(55), ವಿಜಯ್ ಕುಮಾರ್(28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ನಾಲ್ವರು ತಮ್ಮ ಹಳ್ಳಿಗೆ ಮರಳಲು ಕಾಲುದಾರಿ ಮೂಲಕ ಸಾಗುತ್ತಿದ್ದರು. ಮಾರ್ಗದಲ್ಲಿದ್ದ ರೈಲ್ವೆ ಸೇತುವೆಯನ್ನು ಹಾದು ಹೋಗುವಾಗ ರೈಲು ಬಂದ ಕಾರಣ ರೈಲಿನ ಅಡಿ ಸಿಲುಕಿ ಮೃತರಾಗಿದ್ದಾರೆ.