ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೂಲದ 10 ಮೀನುಗಾರರ ಬಂಧನ
ತಮಿಳು ನಾಡಿನ ಹತ್ತು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಇಂದು ಬಂಧಿಸಿದೆ. ನೆಡುಂತೇವು ಎನ್ನುವಲ್ಲಿ ಶ್ರೀಲಂಕಾ ಕರಾವಳಿ ಸಮೀಪ ಅವರು ಮೀನುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ.

Published On :
ರಾಮೇಶ್ವರಂ: ತಮಿಳು ನಾಡಿನ ಹತ್ತು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಇಂದು ಬಂಧಿಸಿದೆ. ನೆಡುಂತೇವು ಎನ್ನುವಲ್ಲಿ ಶ್ರೀಲಂಕಾ ಕರಾವಳಿ ಸಮೀಪ ಅವರು ಮೀನುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ನಾಗಾಪಟ್ಟಣಂ ಜಿಲ್ಲೆಯ ಮೀನುಗಾರರನ್ನು ದ್ವೀಪ ರಾಷ್ಟ್ರಕ್ಕೆ ಸೇರಿದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ್ದಾರೆಂದು ಬಂಧಿಸಲಾಗಿದೆ. ಶ್ರೀಲಂಕಾ ನೌಕಾದಳದವರು ತಮ್ಮ ದೋಣಿ ಜೊತೆಗೆ ಕಾರೈನಗರ್ ಗೆ ಕರೆದೊಯ್ದರೆಂದು, ಮೀನುಗಾರಿಕಾ ದೊಣಿಯ ಮುಖ್ಯಸ್ಥ ಕಾರೈಕಲ್ ಪೆರುಮಾಳ್ ಪಿಳ್ಳೈ ಹೇಳಿದರು.
ಮೀನುಗಾರರು ಕಳೆದ 10 ದಿನಗಳಿಂದ ಆಳ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದರೆಂದು ವರದಿಯಾಗಿದೆ. ಸ್ಥಳೀಯ ಮೀನುಗಾರರ ದೂರಿನ ಮೇಲೆ ಇವರನ್ನು ಬಂಧಿಸಿರುವುದಾಗಿ ಶ್ರೀಲಂಕಾ ನೌಕಾದಳ ಮೂಲಗಳು ಹೇಳಿದೆ.
ಇದೇ ಅ.5ರಂದು ನೆಡುಂತೇವು ವಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದುಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತಮಿಳುನಾಡುTamil NaduSri Lankan Navy Sri Lankafishermen of Tamil Naduಶ್ರೀಲಂಕಾ ನೌಕಾಪಡೆ ಶ್ರೀಲಂಕಾತಮಿಳುನಾಡಿನ ಮೀನುಗಾರರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


