ನಾಂದೇಡ್‌ ಮುನಿಸಿಪಲ್‌ ಚುನಾವಣೆ: 'ಕೈ'ಗೆ ಭರ್ಜರಿ ಗೆಲುವು, ಬಿಜೆಪಿ ದಿಗ್ವಿಜಯಕ್ಕೆ ಬ್ರೇಕ್

ಮಹಾರಾಷ್ಟ್ರದ ನಾಂದೇಡ್‌ - ವಘಾಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಯ ದಿಗ್ವಿಜಯಕ್ಕೆ ಬ್ರೇಕ್ ಹಾಕಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮುಂಬೈ: ಮಹಾರಾಷ್ಟ್ರದ ನಾಂದೇಡ್‌ - ವಘಾಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಯ ದಿಗ್ವಿಜಯಕ್ಕೆ ಬ್ರೇಕ್ ಹಾಕಿದೆ.
ನಾಂದೇಡ್ ಮಹಾನಗರ ಪಾಲಿಕೆಯ ಒಟ್ಟು 81 ಸೀಟುಗಳ ಪೈಕಿ ಈ ವರೆಗೆ ಫ‌ಲಿತಾಂಶ ಘೋಷಿಸಲ್ಪಟ್ಟ 54 ಸೀಟುಗಳಲ್ಲಿ  49 ಸೀಟುಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. ಇನ್ನು ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಶಿವಸೇನೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವಾಣ್‌ ಅವರ ತವರಾಗಿರುವ ನಾಂದೇಡ್‌ನ‌ಲ್ಲಿ ಕಾಂಗ್ರೆಸ್‌ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿತ್ತು. ಇಲ್ಲಿನ ಪೌರಾಡಳಿತೆಯ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಲು ಬಿಜೆಪಿ ಶತಾಯ ಗತಾಯ ಯತ್ನಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com