ಭಾರತ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಡಿಲ್ಲಾ ಪಡೆ ನೇತೃತ್ವದ ಮಾಲ್ಪುರ್ ಉಪ ವಲಯ ಅಧಿಕಾರಿ ಆಕಾಶ್ ಗಿರ್ಪುಂಜೆ ನೇತೃತ್ವದ ಜಂಟಿ ತಂಡ ರಾಯ್ಪುರದಿಂದ 200 ಕಿಲೋ ಮೀಟರ್ ದೂರದಲ್ಲಿರುವ ಮಾನ್ಪುರದ ಒಳ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ತೀವ್ರ ಗುಂಡಿನ ಚಕಮಕಿ ನಡೆದು ಮೂವರು ಬಂಡುಕೋರರು ಹತರಾಗಿದ್ದಾರೆ. ಇವರ ಬಳಿಯಿದ್ದ ಎಕೆ 47 ರೈಫಲ್, ಒಂದು ಇನ್ಸಾಸ್ ರೈಫಲ್, ಒಂದು ಎಸ್ಎಲ್ಆರ್ ರೈಫಲ್ ನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.