ಪೊಲೀಸರು ನೀಡಿರುವ ಮಾಹಿತಿಯಂತೆ ತಾಲಿಬಾನ್ ಹಮ್ಸಾ 1998ರಿಂದಲೂ ಉಗ್ರ ಸಂಘಟನೆ ಪರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಹ್ರೇನ್ ನಲ್ಲಿ ಅಲ್ ಅನ್ಸರ್ ಎಂಬ ಹೆಸರಿನ ಸಂಘಟನೆಯ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಅಲ್ಲಿಯೇ ಇಸಿಸ್ ಸಂಘಟನೆಯ ರಹಸ್ಯ ತರಬೇತಿ ಕೇಂದ್ರ ಸ್ಥಾಪಿಸಿ ಇಸಿಸ್ ಪರ ಒಲವು ಹೊಂದಿರುವ ಯುವಕರನ್ನು ಸೆಳೆದುಕೊಂಡು ಅವರನ್ನು ಉಗ್ರಗಾಮಿಗಳಾಗಿ ತಯಾರು ಮಾಡುತ್ತಿದ್ತ. ಈತ ತಯಾರು ಮಾಡಿದ ಉಗ್ರರ ಪೈಕಿ ಭಾರತದಿಂದ ತೆರಳಿದ ಸುಮಾರು ಯುವಕರು ಕೂಡ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.