ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ

Published On :
ಮುಂಬೈ: 23 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತದ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ಮುಂಬೈನ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ.
ದುರಂತ ನಡೆದಿದ್ದ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣಕ್ಕೆ ಇಂದು ಕೇಂದ್ರ ರೈಲ್ವೇ ಸಚಿವರಾದ ಪಿಯೂಶ್ ಗೋಯಲ್, ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದರು. ಕೇಂದ್ರ ಸಚಿವರಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಸಾಥ್ ನೀಡಿದ್ದರು. ಈ ವೇಳೆ ಮಾತನಾಡಿದ ಪಿಯೋಶ್ ಗೋಯಲ್ ಅವರು, ಭಾರತೀಯ ಸೇನೆಯ ನೆರವಿನೊಂದಿಗೆ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಬಳಿಕ ಮಾತನಾಡಿದ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಈ ಕಾಮಗಾರಿ ಜನವರಿ ವೇಳೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಎಲ್ಫಿನ್ ಸ್ಟೋನ್ ರಸ್ತೆ ಮಾತ್ರವಲ್ಲದೇ ಹೆಚ್ಚು ಜನಸಂದಣಿ ಇರುವ ಮುಂಬೈನ ಇತರೆ ಮೂರು ರೈಲು ನಿಲ್ದಾಣಗಳಲ್ಲೂ ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಇದೇ ಮೊದಲ ಬಾರಿಗೆ ಸಿವಿಲ್ ಕಾರ್ಯಕ್ಕೆ ಸೇನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಈ ಹಿಂದೆ ನಡೆದ ದುರಂತ ನಿಜಕ್ಕೂ ದೊಡ್ಡ ದುರಂತವಾಗಿತ್ತು. ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸಬಾರದು. ಹೀಗಾಗಿ ತುರ್ತಾಗಿ ರೈಲು ನಿಲ್ದಾಣದಲ್ಲಿ ಪಾದಾಚಾರಿ ಮಾರ್ಗದ ನಿರ್ಮಾಣವಾಗಬೇಕಿದೆ. ಇದೇ ಕಾರಣಕ್ಕೆ ಸೈನಿಕರು ನಿಲ್ದಾಣದಲ್ಲಿ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbaiಮುಂಬೈಮಹಾರಾಷ್ಟ್ರMaharashtraElphinstone Road stationFoot Bridge stampedeಎಲ್ಫಿನ್ ಸ್ಟೋನ್ ರಸ್ತೆ ನಿಲ್ದಾಣರೈಲ್ವೇ ಮೇಲ್ಸೇತುವೆ ದುರಂತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


