ಜಾರ್ಖಂಡ್: ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳ ಹತ್ಯೆ

ನಿಷೇಧಿತ ಸಂಘಟನೆ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ(ಪಿಎಲ್‍ಎಫ್‍ಐ)ನ ಟಾಪ್ ಕಮಾಂಡರ್ ಸೇರಿದಂತೆ ನಾಲ್ವರನ್ನು ಭದ್ರತಾ ಪಡೆ ಯೋಧರು ಹತ್ಯೆಗೈದಿದ್ದಾರೆ...
ಮಾವೋವಾದಿ
ಮಾವೋವಾದಿ
ರಾಂಚಿ: ನಿಷೇಧಿತ ಸಂಘಟನೆ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ(ಪಿಎಲ್‍ಎಫ್‍ಐ)ನ ಟಾಪ್ ಕಮಾಂಡರ್ ಸೇರಿದಂತೆ ನಾಲ್ವರನ್ನು ಭದ್ರತಾ ಪಡೆ ಯೋಧರು ಹತ್ಯೆಗೈದಿದ್ದಾರೆ. 
ಜಾರ್ಖಂಡ್ ನ ಕುತಿ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಾವೋವಾದಿಗಳು ಹತ್ಯೆಯಾಗಿದ್ದು ಮೃತರೆಲ್ಲಾ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. 
ವಿವೇಕ್ ಗೋಪೆ ಅಲಿಯಾಸ್ ಮೈನಾ ಗೋಪೆ ಪಿಎಲ್ಎಫ್ಐನ ಉನ್ನತ ಕಮಾಂಡರ್ ಆಗಿದ್ದು ವಿವೇಕ್ ಗೋಪೆ ಹತ್ಯೆಯಿಂದಾಗಿ ಸಂಘಟನೆಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಜಾರ್ಖಂಡ ರಾಜ್ಯದ 24 ಜಿಲ್ಲೆಯಲ್ಲಿ 18 ಜಿಲ್ಲೆಯಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com