ತಮಿಳುನಾಡಿನ ತಿರುಚಿಯಲ್ಲಿ ಕಟ್ಟಡ ಕುಸಿದು ನಾಲ್ವರು ಸಾವು

ತಮಿಳುನಾಡಿನ ತಿರುಚಿಯಲ್ಲಿ ಮೂರು ಮಹಡಿಗಳ ವಸತಿ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಐದು ವರ್ಷದ ಮಗು ಸೇರಿದಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ತಿರುಚಿರಾಪಳ್ಳಿ: ತಮಿಳುನಾಡಿನ ತಿರುಚಿಯಲ್ಲಿ ಮೂರು ಮಹಡಿಗಳ ವಸತಿ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಐದು ವರ್ಷದ ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಸುಮಾರು 70 ವರ್ಷ ಹಳೆಯದಾದ ಈ ಕಟ್ಟಡದ ನಿವಾಸಿಗಳು ನಿದ್ರಿಸುತ್ತಿದ್ದ ವೇಳೆ ಇಂದು ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಕುಸಿದು ಬಿದ್ದಿದ್ದು, 18 ತಿಂಗಳ ಹೆಣ್ಣುಮಗುವೊಂದು ಪವಾಡ ಸದೃಶ ರೀತಿಯಲ್ಲಿ ಕಟ್ಟಡದ ಅವಶೇಷಗಳಿಂದ ಬದುಕಿ ಬಂದಿದೆ. 
ಮೃತಪಟ್ಟವರು ಕಾರ್ತಿಕ್(30) ಮತ್ತು ಆತನ ಮಗ ಹರೀಶ್(5) ಹಾಗೂ ದಂಪತಿಗಳಾದ ಪಳನಿ ಮತ್ತು ರಜತಿ ಎಂದು ಗುರುತಿಸಲಾಗಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕಟ್ಟಡದಲ್ಲಿ ಒಟ್ಟು 20 ಜನ ವಾಸಿಸುತ್ತಿದ್ದು, ಭಾರಿ ಮಳೆಯಿಂದಾಗಿ ಕಟ್ಟಡ ಕುಸಿದು ಬಿದ್ದಿದೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com