ಕೇಂದ್ರ ಸಂಪುಟಕ್ಕೆ ಜೆಡಿಯು ಸೇರ್ಪಡೆ ಕೇವಲ ಮಾಧ್ಯಮ ವದಂತಿ: ನಿತೀಶ್ ಕುಮಾರ್

ಜೆಡಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಭಾಗಿಯಾಗುತ್ತದೆ ಎಂಬುದು ಕೇವಲ ಮಾಧ್ಯಮ ವದಂತಿ....
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on: 
ಪಾಟ್ನಾ: ಜೆಡಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಭಾಗಿಯಾಗುತ್ತದೆ ಎಂಬುದು ಕೇವಲ ಮಾಧ್ಯಮ ವದಂತಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟ ಸೇರಬೇಕು ಎಂಬ ಬಗ್ಗೆ ನಾವು ಯಾವುದೆ ಬಯಕೆ ಅಥವಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಅದು ಕೇವಲ ಮಾಧ್ಯಮಗಳ ವದಂತಿ ಮತ್ತು ಆಧಾರ ರಹಿತ ವರದಿ ಎಂದು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ತಮ್ಮ ಸಂಪುಟ ಪುನರ್ ರಚನೆ ಮಾಡಿದ ಪ್ರಧಾನಿ ಮೋದಿ ಅವರು ಹೊಸದಾಗಿ 9 ಬಿಜೆಪಿ ಸಂಸದರಿಗೆ ಮಂತ್ರಿ ಭಾಗ್ಯ ನೀಡಿದ್ದಾರೆ.
ಬಿಹಾರದಲ್ಲಿ ಇತ್ತೀಚಿಗಷ್ಟೇ ಆರ್ ಜೆಡಿಯೊಂದಿಗೆ ಮೈತ್ರಿ ಮುರಿದುಕೊಂಡು ಮತ್ತೆ ಎನ್ ಡಿಎ ಸೇರಿದ ಜೆಡಿಯು ನ ಇಬ್ಬರು ಸಂಸದರು ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಅವರು, ನಿಮ್ಮ ಮಾಧ್ಯಮ ನಿರೀಕ್ಷೆ ಸುಳ್ಳಾಗಿದೆ. ಹೀಗಾಗಿ ನೀವು ಚಾಪ್ಟರ್ ಕ್ಲೋಸ್ ಮಾಡಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com