ಘಾಜಿಯಾಬಾದ್: ಸೆಲ್ಫೀ ಹುಚ್ಚಿಗೆ 8 ವರ್ಷದ ಬಾಲಕ ಬಲಿ

ತಲೆಗೆ ಗನ್ ಇಟ್ಟುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ ಗುಂಡು ನೇರವಾಗಿ ತೆಲೆ ಹೊಕ್ಕಿ, 8 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಘಾಜಿಯಾಬಾದ್: ತಲೆಗೆ ಗನ್ ಇಟ್ಟುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ ಗುಂಡು ನೇರವಾಗಿ ತೆಲೆ ಹೊಕ್ಕಿ, 8 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ಸೋಮವಾರ ನಡೆದಿದೆ. 
ಜುನೈದ್ (8) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಗೆಳೆಯರೊಡನೆ ಕೂಡಿ ಜುನೈದ್ ತಲೆಗೆ ಪಿಸ್ತೂಲ್ ಇಟ್ಟುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಪಿಸ್ತೂಲಿನ ಟ್ರಿಗರ್ ಒತ್ತಿದ್ದಾನೆ. ಪರಿಣಾಮ ಗುಂಡು ನೇರವಾಗಿ ತಲೆಗೆ ಹೊಕ್ಕು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 
ಗುಂಡು ಹಾರಿದ ಶಬ್ಧ ಕೇಳುತ್ತಿದ್ದಂತೆಯೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಾಲಕನ ಬಳಿಯಿದ್ದ ಗನ್ ನೆರೆಮನೆಯ ಕಾಲೆ ಎನ್ನುವವರಿಗೆ ಸೇರಿದ್ದಾಗಿದ್ದು, ಅಕ್ರಮವಾಗಿ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. 
ಗನ್ ಜೊತೆಗೆ ಸೆಲ್ಫೀ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಬಾಲಕ ನಿರ್ಧರಿಸಿದ್ದ. ಘಟನೆ ನಡೆದ ಕೂಡಲೇ ಬಾಲಕನನ್ನು ಸ್ಥಳೀಯಹು ದೆಹಲಿಯ ಜಿಟಿಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಷ್ಟರಲ್ಲಾಗಲೇ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಕ್ರಮವಾಗಿ ಗನ್ ಇಟ್ಟುಕೊಂಡಿದ್ದ ಕಾಲೆಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com