ಚೆನ್ನೈ: ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಯೋಧರ ಪತ್ನಿಯರು ತಾವೂ ಸೇನೆ ಸೇರುವ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
2015ರ ನವೆಂಬರ್‌ನಲ್ಲಿ ಜಮ್ಮು-ಕಾಶ್ಮೀರದ ಕುಪ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಕರ್ನಲ್ ಸಂತೋಶ್ ಮಹಾದಿಕ್ ಅವರ ಪತ್ನಿ ಸ್ವಾತಿ ಮಹಾದಿಕ್ ಹಾಗೂ 2009ರಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಯೋಧ ಮಿಶ್ರಾ ಅವರ ಪತ್ನಿ ನಿಧಿ ಮಿಶ್ರಾ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್‌ಗಳಾಗಿ ನೇಮಕಗೊಂಡಿದ್ದಾರೆ.
ಸ್ವಾತಿ ಮಹಾದಿಕ್ ಹೇಳಿದಂತೆ "ಪತಿ ಹುತಾತ್ಮರಾದ ನಂತರ ನಾನೂ ಏಕೆ ಸೈನ್ಯ ಸೇರಿ ದೇಶ ಸೇವೆ ಮಾಡಬಾರದು ಎನಿಸಿತು.ನಾನು ಪುರುಷ ಸೈನಿಕರ ವಿಭಾಗಕ್ಕೆ ಸರಿಸಮನಾದ ತರಬೇತಿ ಪಡೆದಿದ್ದು, ಯುದ್ಧ ಸಂದರ್ಭಗಳಲ್ಲಿ ಮುಖ್ಯಪಾತ್ರವಹಿಸಲು ಸಿದ್ಧಳಾಗಿದ್ದೇನೆ."
ಎರಡು ಮಕ್ಕಳ ತಾಯಿ ಆಗಿರುವ ಸ್ವಾತಿ ಮಹಾಧಿಕ್ ಕಳೆದ ಅಕ್ಟೋಬರ್‌ನಲ್ಲಿ ಚೆನ್ನೈನ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ್ದರು. ಅಲ್ಲಿ 11 ತಿಂಗಳ ತರಬೇತಿ ಪಡೆದ ನಂತರ ಈಗ ಪುಣೆಯಲ್ಲಿ ಶಸಸ್ತ್ರ ಪಡೆಯ ಕರ್ನಲ್ ಆಗಿ ಅಧಿಕಾರ ವಹಿಸಿಕೊಂಡರು
ಇದೇ ವೇಳೆ ಇನ್ನೋರ್ವ ಹುತಾತ್ಮ ಯೋಧನ ಪತ್ನಿ ನಿಧಿ ಮಿಶ್ರಾ ಕೂದ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಪ್ರವೇಶ ಪರೀಕ್ಷೆ ತೇರ್ಗಡೆಯಾಗಲು 5 ಪ್ರಯತ್ನಗಳನ್ನು ತೆಗೆದುಕೊಂಡು ನಂತರ ತರಬೇತಿಗೆ ಹಾಜರಾದ ನಿಧಿ ತನ್ನ ಕಠಿಣ ನಿರ್ಧಾರಗಳಿಂದ ಸೇನೆಗೆ ಸೇರ್ಪಡೆಯಾಗಿದ್ದಾರೆ.