ಕಾಶ್ಮೀರ ನಿರಾಶ್ರಿತರಿಗೆ 3 ಸಾವಿರ ಉದ್ಯೋಗ ಕಲ್ಪಿಸಲು ಕೇಂದ್ರದ ನಿರ್ಧಾರ: ರಾಜನಾಥ್ ಸಿಂಗ್

ಕಾಶ್ಮೀರದಲ್ಲಿರುವ ನಿರಾಶ್ರಿತರಿಗಾಗಿ ಸುಮಾರು 3 ಸಾವಿರ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗೆ ಬೊಕ್ಕಸದಿಂದ 1080 ಕೋಟಿ ರು.ಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್
ಕೇಂದ್ರ ಸಚಿವ ರಾಜನಾಥ್ ಸಿಂಗ್
Updated on: 
ಜಮ್ಮು: ಕಾಶ್ಮೀರದಲ್ಲಿರುವ ನಿರಾಶ್ರಿತರಿಗಾಗಿ ಸುಮಾರು 3 ಸಾವಿರ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗೆ ಬೊಕ್ಕಸದಿಂದ 1080 ಕೋಟಿ ರು.ಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನೀಡಲಾಗಿದೆ  ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಕೇಂದ್ರ ಸರ್ಕಾರ ಗಡಿಯಲ್ಲಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕಿಸಲು ಮತ್ತು ಸಮಸ್ಯೆ ಬಗೆ ಹರಿಸಲು ತಜ್ಞರ  ತಂಡವನ್ನು ರಚಿಸಲು ನಿರ್ಧರಿಸಿದೆ. ಈ ಹಿಂದೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಕ್ರಮ ವಲಸಿಗರ ಕುರಿತು ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಕಣಿವೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ  ಕೇಂದ್ರ ನಿರ್ಧರಿಸಿದ್ದು, ಕಾಶ್ಮೀರದಲ್ಲಿರುವ ನಿರಾಶ್ರಿತರಿಗಾಗಿ ಸುಮಾರು 3 ಸಾವಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕಾಶ್ಮೀರ ಸರ್ಕಾರಕ್ಕೆ 1080 ಕೋಟಿ ರು.ಗಳ ಅನುದಾನವನ್ನು ನೀಡಲಾಗಿದೆ  ಎಂದು ತಿಳಿಸಿದರು.

ಇನ್ನು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ಕೈಗೊಂಡಿದ್ದು, ಇದಕ್ಕಾಗಿ ಸುಮಾರು 2 ಸಾವಿರ ಕೋಟಿ  ಪ್ಯಾಕೇಜ್ ಘೋಷಣೆ ಮಾಡಲಾಗಿದೆ.  ವಲಸಿಗರ ಕುರಿತಂತೆ ಭಾರತ ಮೊದಲಿನಿಂದಲೂ ಮಾನವೀಯ ಕಳಕಳಿ ಹೊಂದಿದ್ದು, ಅದು ಇನ್ನು ಮುಂದೆಯೇ ಮುಂದುವರೆಯಲಿದೆ. ಆದರೆ ನಮ್ಮ ಸರ್ಕಾರ ಅಕ್ರಮ ವಲಸೆಯನ್ನು ವಿರೋಧಿಸುತ್ತದೆ. 1989ರ ಪರಿಸ್ಥಿತಿಯನ್ನು  ನಾವಿನ್ನೂ ಮರೆತಿಲ್ಲ. ಹೀಗಾಗಿ ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ಸಹಕಾರ ಅತ್ಯಗತ್ಯ ಎಂದು ರಾಜನಾಥ್ ಸಿಂಗ್ ಹೇಳಿದರು.

ಅಂತೆಯೇ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಪ್ರತಿಯೊಂದು ಕದನ ವಿರಾಮ ಉಲ್ಲಂಘನೆಗೂ ನಮ್ಮ ಸೈನಿಕರು ದಿಟ್ಟ ಉತ್ತರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಹುಲ್ ನೀಡುವ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆ ಕೇಳಬೇಡಿ, ಅವರ ಹೇಳಿಕೆಗೆ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ
ಇದೇ ವೇಳೆ ಅಮೆರಿಕದ ಬರ್ಕ್ ಲೇ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗಳ ಕುರಿತಂತೆ ಪ್ರತಿಕ್ರಿಯೆ ನೀಡುಲು ಹಿಂದೇಟು ಹಾಕಿದ ರಾಜನಾಥ್ ಸಿಂಗ್ ಅವರು, ರಾಹುಲ್ ನೀಡುವ ಪ್ರತೀ ಹೇಳಿಕೆಗೂ  ಪ್ರತಿಕ್ರಿಯೆ ಕೇಳಬೇಡಿ.. ಅವರ ಹೇಳಿಕೆಗಳಿಗೆ ಅಷ್ಟೋಂದು ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com