ರಾಜಕೀಯ ಅಸ್ಥಿತ್ವಕ್ಕಾಗಿ ಲಾಲು ನೇತೃತ್ವದ ಆರ್ ಜೆಡಿ ಸೇರಿ: ಶರದ್ ಯಾದವ್ ಗೆ ಜೆಡಿಯು ಸಲಹೆ

ಹಿರಿಯ ಬಂಡಾಯ ನಾಯಕ ಶರದ್ ಯಾದವ್ ಅವನ್ನು ಲಾಲೂ ಪ್ರಸಾದ್ ನೇತೃತ್ವದ ಆರ್ ಜೆಡಿ ಪಕ್ಷ ಸೇರುವಂತೆ...
ಶರದ್ ಯಾದವ್
ಶರದ್ ಯಾದವ್
Updated on: 
ಪಾಟ್ನಾ: ಬಿಹಾರದಲ್ಲಿರುವ ಆಡಳಿತಾರೂಢ ಜೆಡಿಯು ಹಿರಿಯ ಬಂಡಾಯ ನಾಯಕ ಶರದ್ ಯಾದವ್ ಅವನ್ನು ಲಾಲೂ ಪ್ರಸಾದ್ ನೇತೃತ್ವದ ಆರ್ ಜೆಡಿ ಪಕ್ಷ ಸೇರುವಂತೆ ಸಲಹೆ ನೀಡಿದೆ.
ಶರದ್ ಯಾದವ್ ಯಾವುದೇ ವಿಳಂಬ ಮಾಡದೇ ಆರ್ ಜೆಡಿ ಸೇರಬೇಕು  ಮತ್ತು ಪಕ್ಷದ ಲ್ಯಾಟೀನ್ ಚಿಹ್ನೆಯನ್ನು  ತಮ್ಮದೆಂದು ಒಪ್ಪಿಕೊಳ್ಳಬೇಕು ಎಂದು  ಜೆಡಿಯು ವಕ್ತಾರ ನೀರಜ್ ಕುಮಾರ್  ಸಲಹೆ ನೀಡಿದ್ದಾರೆ.
ಸರಿಯಾದ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶರದ್ ಯಾದವ್ ಅವರ ಪಕ್ಷವನ್ನು ಮೂಲ ಜೆಡಿಯು ಎಂದು ಪರಿಗಣಿಸಬೇಕೆಂದು ಮಾಡಿದ್ದ ಮನವಿಯನ್ನು ಪರಿಗಣಿಸಲಿಲ್ಲ.
ರಾಜಕೀಯದಲ್ಲಿ ಉಳಿಯಬೇಕೆಂದರೇ ಆರ್ ಜೆಡಿ ಸೇರುವುದನ್ನು ಬಿಟ್ಟರೇ ಶರದ್ ಯಾದವ್ ಅವರಿಗೆ ಬೇರೆ ಆಯ್ಕೆಯಿಲ್ಲ ಎಂದು ನೀರಜ್ ಕುಮಾರ್ ಹೇಳಿದ್ದಾರೆ. ಲಾಲು ಕುಟುಂಬಕ್ಕೆ ಯಾದವ್ ಅಂಕಲ್ ಆಗುತ್ತಿದ್ದಾರೆ. ಶೀಘ್ರವೇ ಶರದ್ ಯಾದವ್ ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com