ಪಕ್ಷದ ರಕ್ಷಣೆಗಾಗಿ ಯಾವುದೇ ಹಂತಕ್ಕೂ ಹೋಗಲು ಸಿದ್ಧ: ಟಿಟಿವಿ ದಿನಕರನ್

ಎಐಎಡಿಎಂಕೆ ಪಕ್ಷದ ರಕ್ಷಣೆಗೆ ತಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ಉಚ್ಠಾಟಿತ ಮುಖಂಡ ಟಿಟಿವಿ ದಿನಕರನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಚೆನ್ನೈ: ಎಐಎಡಿಎಂಕೆ ಪಕ್ಷದ ರಕ್ಷಣೆಗೆ ತಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ಉಚ್ಠಾಟಿತ ಮುಖಂಡ ಟಿಟಿವಿ ದಿನಕರನ್ ಹೇಳಿದ್ದಾರೆ.
ಬುಧವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿವಿ ದಿನಕರನ್ ಅವರು, ನಾವು ಯಾವುದೇ ಕಾರಣಕ್ಕೂ ಡಿಎಂಕೆ ಪಕ್ಷದೊಂದಿಗೆ ಸೇರುವುದಿಲ್ಲ. ಡಿಎಂಕೆ ಪಕ್ಷ ನಮ್ಮ ರಾಜಕೀಯ ಶತ್ರುಗಳಾಗಿದ್ದು, ಅವರೊಂದಿಗೆ  ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಆದರೆ ನಾವು ನಮ್ಮ ಪಕ್ಷದ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸಿದ್ಧ. ನಮ್ಮ ಬಳಿ 21 ಶಾಸಕರ ಬೆಂಬಲವಿದ್ದು, ಪಳನಿ ಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ಕೂಡಲೇ  ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಪಳನಿಸ್ವಾಮಿ ಅವರಿಗೆ ಬಹುಮತ ಸಾಬೀತಿಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ನಿನ್ನೆ ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆ ಕುರಿತಂತೆ ಮಾತನಾಡಿದ ದಿನಕರನ್. ನಿನ್ನೆ ನಡೆದ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಕೌನ್ಸಿಲ್ ಸದಸ್ಯರೇ ಅಲ್ಲ. ಹೀಗಿರುವಾಗ ಆ ಸಭೆಗೆ ಯಾವುದೇ ರೀತಿಯ  ಕಾನೂನು ಮಾನ್ಯತೆ ಇಲ್ಲ ಎಂದು ದಿನಕರನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com