ಹೌರಾದ ಅಂಗಡಿಯೊಂದರಲ್ಲಿ ಸಿಕ್ಕಿವೆ 14 ಸಜೀವ ಬಾಂಬ್

ಹೌರಾ ಜಿಲ್ಲೆಯ ಅಂಗಡಿಯೊಂದರಿಂದ ಪೊಲೀಸರು 14 ಸಜೀವ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ...
ಸಜೀವ ಬಾಂಬ್
ಸಜೀವ ಬಾಂಬ್
ಹೌರಾ(ಪಶ್ಚಿಮಬಂಗಾಳ): ಹೌರಾ ಜಿಲ್ಲೆಯ ಅಂಗಡಿಯೊಂದರಿಂದ ಪೊಲೀಸರು 14 ಸಜೀವ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ. 
ಕಳೆದ ರಾತ್ರಿ ಈ ಅಂಗಡಿಯಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ಗಾಯಗೊಂಡಿದ್ದ ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದಾಗ ಪೊಲೀಸರಿಗೆ ಹದಿನಾಲ್ಕು ಸಜೀವ ಬಾಂಬ್ ಗಳು ಸಿಕ್ಕಿವೆ. 
ನಿನ್ನೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಅಂಗಡಿ ಮಾಲೀಕ ಕೊಮೆರ್ ಅಲಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದ ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ತನಿಖೆ ಪ್ರಗತಿಯಲ್ಲಿದ್ದು ಅಂಗಡಿ ಮಾಲೀಕ ಅಲಿ ಆಸ್ಪತ್ರೆಯಲ್ಲಿರುವುದರಿಂದ ಆತನನ್ನು ವಿಚಾರಣೆಗೊಳಪಡಿಸಲಾಗಿಲ್ಲ ಎಂದು ಮಾನಿಕ್ ಪುರ್ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com