ಮತ್ತೊಂದು ಎಡವಟ್ಟು: ಅರ್ಜನ್ ಸಿಂಗ್ ಅವರನ್ನು ಏರ್ ಮಾರ್ಷಲ್ ಎಂದ ರಾಹುಲ್ ಗಾಂಧಿ

ಭಾರತೀಯ ವಾಯುಪಡೆಯ ಮೊದಲ ಸರ್ವಶ್ರೇಷ್ಠ ಮಾರ್ಷಲ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸುವ ಭರತದಲ್ಲಿ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್
ರಾಹುಲ್ ಗಾಂಧಿ ಟ್ವೀಟ್
ನವದೆಹಲಿ: ಭಾರತೀಯ ವಾಯುಪಡೆಯ ಮೊದಲ ಸರ್ವಶ್ರೇಷ್ಠ ಮಾರ್ಷಲ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸುವ ಭರತದಲ್ಲಿ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ. 
ಟ್ವಿಟರ್ ನಲ್ಲಿ ಅರ್ಜನ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಿರುವ ರಾಹುಲ್ ಗಾಂಧಿ, ಭಾರತೀಯ ವಾಯುಪಡೆಯ ಮಾರ್ಷಲ್ ನ್ನು ಏರ್ ಮಾರ್ಷಲ್ ಎಂದು ಕರೆದಿದ್ದಾರೆ. ಶ್ರೇಷ್ಠ ಯೋಧ ಏರ್ ಮಾರ್ಷಲ್ ಅರ್ಜನ್ ಸಿಂಗ್ ಅವರ ಸಾವು ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ. 
ವಾಯುಪಡೆಯ ಮಾರ್ಷಲ್ 5 ಸ್ಟಾರ್ ಶ್ರೇಣಿಯಾಗಿದ್ದರೆ, ಏರ್ ಮಾರ್ಷಲ್ 3 ಸ್ಟಾರ್ ಶ್ರೇಣಿಯ ಹುದ್ದೆಯಾಗಿದೆ. ತಪ್ಪು ತಿಳಿಯುತ್ತಿದ್ದಂತೆಯೇ ರಾಹುಲ್ ಗಾಂಧಿ ಟ್ವೀಟ್ ಖಾತೆಯಲ್ಲಿ ತಪ್ಪನ್ನು ತಿದ್ದಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com