ಪಾಟ್ನ: ರಾಷ್ಟ್ರೀ ಜನತಾ ದಳ (ಆರ್'ಜೆಡಿ) ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಮೊಹಮ್ಮದ್ ತಸ್ಲಿಮುದ್ದೀನ್ ಅವರ ನಿಧನ ಹೊಂದಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಉಸಿರಾಟ ಸಮಸ್ಯೆಯಿಂದಾಗಿ ಆರ್ ಜೆಡಿ ನಾಯಕ ಮೊಹಮ್ಮದ್ ತಸ್ಲೀಮುದ್ದೀನ್ ಅವರು ಚೆನ್ನೈನಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಂಸದೀಯ ಸಮಿತಿ ಸಭೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ತಸ್ಲೀಮುದ್ದೀನ್ ಅವರು ಚೆನ್ನೈಗೆ ಭೇಟಿ ನೀಡಿದ್ದರು. ಉಸಿರಾಟ ಸಮಸ್ಯೆಯಿಂದಾಗಿ ಆ.24 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಸ್ಲೀಮುದ್ದೀನ್ ಅವರ ಪುತ್ರ ಹಾಗೂ ಶಾಸಕ ಸರ್ಫಾರಾಜ್ ಆಲಂ ಅವರು ಹೇಳಿದ್ದಾರೆ.
ಸ್ವಕ್ಷೇತ್ರ ಅರಾರಿಯಾ ಜಿಲ್ಲೆಯಲ್ಲಿ ತಸ್ಲೀಮುದ್ದೀನ್ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ ಎಂದು ಸರ್ಫರಾಜ್ ತಿಳಿಸಿದ್ದಾರೆ.
ತಸ್ಲೀಮುದ್ದೀನ್ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.