ಕಾರ್ಯಕ್ರಮದಲ್ಲಿ ಹಾಜರಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತನಾಡಿ, ನಮ್ಮ ದೇಶವನ್ನು ಹೇಗೆ ಪ್ರೀತಿಸಬೇಕು. ದೇಶಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಬೇಕೆಂಬುದು ಶಾಲಾ ಪಠ್ಯಕ್ರಮಗಳ ಭಾಗವಾಗಬೇಕು. ನಾವು ಒಂದೇ ನೆಲದ ನೀರನ್ನು ಕುಡಿಯುತ್ತೇವೆ. ಆಹಾರವನ್ನು ಸೇವಿಸುತ್ತೇವೆ. ನಮ್ಮ ರಕ್ತ ಕೆಂಪಾಗಿದೆ. ನಾವು ಹಲವು ಧರ್ಮಗಳನ್ನು ಅನುಸರಿಸಬಹುದು. ವಿದ್ಯಾರ್ಥಿಗಳಿಗೆ ಪ್ರೀತಿ, ಭ್ರಾತೃತ್ವ ಮತ್ತು ದೇಶಭಕ್ತಿ ಬಗ್ಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.