ನನ್ನ ವಿರುದ್ಧ ಚಾರ್ಜ್'ಶೀಟ್ ಹಾಕಿ: ಬಿಜೆಪಿಗೆ ಸವಾಲು ಹಾಕಿದ ತೇಜಸ್ವಿ ಯಾದವ್

ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್...
ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
Updated on: 
ಪಾಟ್ನ: ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಸಾಧ್ಯವಿದ್ದರೆ ನನ್ನ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿಸಿ' ಎಂದು ಸವಾಲು ಹಾಕಿದ್ದಾರೆ. 
ಮೇವು ಹಗರಣ ಸಂಬಂಧ ತಪ್ಪಿತಸ್ಥ ಎಂದು ಸಾಬಾತಾಗಿರುವ ಹಿನ್ನಲೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಜೈಲು ಪಾಲಾಗಿದ್ದು ಈ ಹಿನ್ನಲೆಯಲ್ಲಿ ಬಿಹಾರ ರಾಜ್ಯದಲ್ಲಿರುವ ಆರ್'ಜೆಡಿ ಪಕ್ಷವನ್ನು ತೇಜಸ್ವಿ ಯಾದವ್ ಅವರು ಮುನ್ನಡೆಯುತ್ತಿದ್ದಾರೆ. 
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿರುವ ಅವರು, ರಾಜ್ಯದ ವಿಧಾನಸಭೆಯಿಂದ ಬೀದಿಯವರೆಗೆ ನಾನು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರಿಗೆ ಸಿಬಿಐಗೆ ಹೇಳಿ ನನ್ನ ವಿರುದ್ಧ ಚಾರ್ಜ್ ಶೀಟ್ ಹಾಕಿಸುವಂತೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದೇನೆ. ನನ್ನ ಹಾಗೆ ಬಹಿರಂಗವಾಗಿ ಚಾರ್ಜ್ ಶೀಟ್ ಹಾಕಿ ಎಂದು ಹೇಳಿರುವ ಯಾವುದೇ ನಾಯಕ ರಾಷ್ಟ್ರದ ರಾಜಕಾರಣದಲ್ಲಿ ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಸಿಬಿಐ ಬಳಸಿಕೊಂಡು ಟೇಬಲ್ ಪಾಲಿಟಿಕ್ಸ್ ನಡೆಸುತ್ತಿರುವವರು ನಿತೀಶ್ ಕುಮಾರ್ ಅವರಂತಹವರನ್ನು ಬೆದರಿಸಬಹುದೇ ವಿನಃ ನನ್ನನ್ನು ಅಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com