4ಜಿ ನೆಟ್ವರ್ಕ್: ಬೆಂಗಳೂರು, ದೆಹಲಿಯನ್ನು ಹಿಂದಿಕ್ಕಿದ ಪಾಟ್ನ!

4 ಜಿ ನೆಟ್ವರ್ಕ್ ಲಭ್ಯತೆಯ ವಿಷಯದಲ್ಲಿ ಬಿಹಾರದ ರಾಜಧಾನಿ ಪಾಟ್ನ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ರಾಷ್ಟ್ರರಾಜಧಾನಿ ದೆಹಲಿಯನ್ನೂ ಹಿಂದಿಕ್ಕಿ, 4 ಜಿ ನೆಟ್ವರ್ಕ್ ಸುಲಭವಾಗಿ ಲಭ್ಯವಾಗುವ ಟಾಪ್ ನಗರಗಳ...
4ಜಿ ನೆಟ್ವರ್ಕ್
4ಜಿ ನೆಟ್ವರ್ಕ್
ನವದೆಹಲಿ: 4 ಜಿ ನೆಟ್ವರ್ಕ್ ಲಭ್ಯತೆಯ ವಿಷಯದಲ್ಲಿ ಬಿಹಾರದ ರಾಜಧಾನಿ ಪಾಟ್ನ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ರಾಷ್ಟ್ರರಾಜಧಾನಿ ದೆಹಲಿಯನ್ನೂ ಹಿಂದಿಕ್ಕಿ, 4 ಜಿ ನೆಟ್ವರ್ಕ್ ಸುಲಭವಾಗಿ ಲಭ್ಯವಾಗುವ ಟಾಪ್ ನಗರಗಳ ಪಟ್ಟಿಯಲ್ಲಿದೆ. 
ಸಮೀಕ್ಷೆಯೊಂದರ ಪ್ರಕಾರ 4 ಜಿ ನೆಟ್ವರ್ಕ್ ಲಭ್ಯತೆ ಮೆಟ್ರಿಕ್ ಪ್ರಕಾರ ಪಾಟ್ನಾ ಮುಂಚೂಣಿಯಲ್ಲಿದ್ದು, ಮುಂಬೈ 15 ನೇ ಸ್ಥಾನದಲ್ಲಿ ದೆಹಲಿ 17 ನೇ ಸ್ಥಾನದಲ್ಲಿದೆ. ಪಾಟ್ನಾದಲ್ಲಿ ಶೇ.92.6 ರಷ್ಟು ನೆಟ್ವರ್ಕ್ ಲಭ್ಯತೆ ಇದ್ದರೆ, ಶೇ.88.3 ರಷ್ಟು ಲಭ್ಯತೆ ಹೊಂದಿರುವ ಬೆಂಗಳೂರು 10 ನೇ ಸ್ಥಾನದಲ್ಲಿದೆ. 
ಡಿಸೆಂಬರ್ 1, 2017 ರಿಂದ 90 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದ್ದು, 20 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲಾ 20 ನಗರಗಳಲ್ಲಿಯೂ ಶೇ.80 ಕ್ಕಿಂತ ಹೆಚ್ಚು 4ಜಿ ಲಭ್ಯತೆ ಇದೆ ಎಂದು ಲಂಡನ್ ಮೂಲದ ನಿಸ್ತಂತು ಕವರೇಜ್ ಮ್ಯಾಪಿಂಗ್ ಸಂಸ್ಥೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com