ಚೀನಾ ವಿರೋಧವನ್ನು ಭಾರತ ತಳ್ಳಿಹಾಕಿದ್ದು, ಈ ವಿಷಯವನ್ನು ಚೀನಾ ಮಾ.15 ರಂದು ನಡೆದ ಬಾರ್ಡರ್ ಪರ್ಸನಲ್ ಮೀಟಿಂಗ್ ನಲ್ಲಿಯೂ ಪ್ರಸ್ತಾಪಿಸಿತ್ತು. ಆದರೆ ಆಸಾಫಿಲಾ ಭಾರತದ ಭಾಗ ಎಂದು ಸ್ಪಷ್ಟಪಡಿಸಿದ್ದಾಗಿ ಭಾರತ ತಿಳಿಸಿದೆ. ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಭಾರತ ಗಸ್ತು ತಿರುಗುತ್ತಿರುವ ಪ್ರದೇಶ ಅತಿಕ್ರಮಣಕ್ಕೊಳಗಾಗಿದೆ ಎಂದು ಚೀನಾ ಆರೋಪಿಸಿದೆ. ಆದರೆ ಚೀನಾ ಆರೋಪವನ್ನು ತಿರಸ್ಕರಿಸಿರುವ ಭಾರತ ಚೀನಾ ಭಾರತದ ಗಡಿ ಪ್ರದೇಶವನ್ನು ಅತಿಕ್ರಮಿಸಿದೆ ಎಂದು ಹೇಳಿದೆ.