ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕೆಂದು ಆಗ್ರಹಿಸುತ್ತಿರುವ ನ್ಯಾಯಾಮೂರ್ತಿ ಜೆ.ಚಲಮೇಶ್ವರ್ ಅವರು, ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಕಾರ್ಯನಿರ್ಹವಣೆಯ ಬದಲಾಗಿ ಪ್ರಭಾವಗಳಿಂದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸೋಮವಾರ ಹೇಳಿದ್ದಾರೆ.
ಭಾರತದ ಉನ್ನತ ನ್ಯಾಯಾಲಯ ಬಿರುದು ಕುರಿತ ಸಮಿತಿ ಚರ್ಚೆಯಲ್ಲಿ ಮಾತನಾಡಿರುವ ಅವರು, ಆಯ್ಕೆ ಪ್ರಕ್ರಿಯೆಗೆ ಜವಾಬ್ದಾರಿ ಹೊತ್ತವರು ದಾಖಲೆಗಳಲ್ಲಿ ಮೌಲ್ಯಮಾಪನಗಳನ್ನೂ ನೀಡಬೇಕು. ಅದರಿಂದ ಉದ್ಭವಿಸುವ ಹೆಚ್ಚಿನ ಸಮಸ್ಯೆಗಳು ನಿವಾರಣೆಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಉನ್ನತ ನ್ಯಾಯಾಲಯದ ನ್ಯಾಯಾಧೀಶರು, (ಸುಪ್ರೀಂಕೋರ್ಟ್) ಅತ್ಯಂತ ಕಠಿಣವಾಗಿರುತ್ತದೆ. ಸಾಮಾನ್ಯವಾಗಿ ಇಂತಹ ನ್ಯಾಯಾಧೀಶರನ್ನು ಕಾರ್ಯನಿರ್ವಹಣೆಯ ಬದಲಾಗಿ ಪ್ರಭಾವಗಳ ಮೇಲೆ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಸುಧಾರಣೆ ಅಗತ್ಯತೆಗಳ ಕುರಿತು ಮಾತನಾಡಿರುವ ಅವರು, ಒಂದು ವೇಳೆ ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಗಳು ಕಂಡು ಬಂದಿದ್ದೇ ಆದರೆ, ಉನ್ನತ ನ್ಯಾಯಾಲಯದ 31 ನ್ಯಾಯಮೂರ್ತಿಗಳು, ಪ್ರತೀ ರಾಜ್ಯ ತನ್ನ ಸ್ಥಾನಕ್ಕೆ ತನ್ನ ಹಕ್ಕನ್ನು ಪಡೆದುಕೊಳ್ಳುತ್ತದೆ ಎಂದಿದ್ದಾರೆ.