ಎಫ್ ಐ ಆರ್ ಗಾಗಿ ಫಿಜ್ಜಾ ಬೇಡಿಕೆ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಮಾನತು

ರೆಸ್ಟೋರೆಂಟ್ ಮಾಲೀಕರಿಂದ ಪಿಜ್ಜಾಗಾಗಿ ಬೇಡಿಕೆ ಇಟ್ಟ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಕ್ನೋ: ರೆಸ್ಟೋರೆಂಟ್ ಮಾಲೀಕರಿಂದ ಪಿಜ್ಜಾಗಾಗಿ ಬೇಡಿಕೆ ಇಟ್ಟ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. 
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಜ್ರತ್ನಂಗಿ ಪೊಲೀಸ್ ಠಾಣೆಯಲ್ಲಿ ರೆಸ್ಟರೊಂಟ್ ಮಾಲೀಕ ರೋಹಿತ್ ಬೆರಿ ಎಂಬುವರು, ಅಪರಿಚಿತ ವ್ಯಕ್ತಿಯೊಬ್ಬ ಆಹಾರ ಸೇವಿಸಿ ಹಣ ನೀಡದೇ ಹೋಗಿದ್ದರ ಸಂಬಂಧ ದೂಬರು ಸಲ್ಲಿಸಿದ್ದರು.
ತಾವು ದಾಖಲಿಸಿದ್ದ ದೂರಿನ ಎಫ್ ಐಆರ್ ಕಾಪಿ ತೆಗೆದುಕೊಳ್ಳಲು ರೋಹಿತ್ ಪೊಲೀಸ್ ಠಾಣೆಗೆ ಬಂದಿದ್ದಾರೆ, ಈ ವೇಳೆ ಠಾಣೆಯಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಎಫ್ ಐ ಆರ್ ಕಾಪಿ ಬೇಕೆಂದರೇ ಎಲ್ಲರಿಗೂ ಫಿಜ್ಜಾ ತಂದು ಕೊಡುವಂತೆ ಹೇಳಿದ್ದಾರೆ.  ನಾವು ಅವರಿಗೆ ಪಿಜ್ಜಾ ತೆಗೆದುಕೊಂಡು ಹೋಗಿ ಕೊಟ್ಟೆವು, ಆದರೆ ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಅವರು ಬಂದು ನಾವು ಕಳುಹಿಸಿದ್ದ ಪಿಜ್ಜಾಗೆ ಹಣ ನೀಡಿ ಹೋದರು ಎಂದು ರೆಸ್ಟೊರೆಂಟ್ ಮಾಲೀಕ ರೋಹಿತ್ ಬೆರ್ರಿ ಹೇಳಿದ್ದಾರೆ. 
ಇನ್ನೂ ಪ್ರಕರಣ ಸಂಬಂದ ಮಹಿಳಾ ಸಬ್ ಇನ್ಸ್ ಪೆಕ್ಟಕ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಎಸ್ ಪಿ ಹಿರೇಂದ್ರ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com