ವಿಜಯ್ ಮಲ್ಯ ಹಸ್ತಾಂತರ: ಸಿಬಿಐ ಸಾಕ್ಷ್ಯ ಅಂಗೀಕರಿಸಿದ ಲಂಡನ್ ನ್ಯಾಯಾಲಯ; ಜುಲೈ 11ಕ್ಕೆ ವಿಚಾರಣೆ

ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಿಬಿಐ ನೀಡಿದ್ದ ಸಾಕ್ಷ್ಯಾಧಾರಗಳನ್ನು ಅಂಗೀಕರಿಸಿದ್ದು, ಜು.11 ಕ್ಕೆ ಪ್ರಕರಣದ ವಿಚಾರಣೆಯನ್ನುಮುಂದೂಡಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ಬ್ರಿಟನ್: ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಿಬಿಐ ನೀಡಿದ್ದ ಸಾಕ್ಷ್ಯಾಧಾರಗಳನ್ನು ಅಂಗೀಕರಿಸಿದ್ದು, ಜು.11 ಕ್ಕೆ ಪ್ರಕರಣದ ವಿಚಾರಣೆಯನ್ನುಮುಂದೂಡಿದೆ. 
ಮುಂದಿನ ವಿಚಾರಣೆಯಲ್ಲಿ ವಾದ ಮಂಡನೆಯಾಗಲಿದ್ದು, ಅಂತಿಮ ಹಂತದ ವಾದವನ್ನು ಲಿಖಿತ ರೂಪದಲ್ಲಿ ನ್ಯಾಯಾಧೀಶರಿಗೆ  ಮುಂದಿನ ಎರಡು ತಿಂಗಳಲ್ಲಿ ಸಲ್ಲಿಸಲಾಗುತ್ತದೆ, ಏ.27 ರಂದು ನಡೆದ ವಿಚಾರಣೆಯಲ್ಲಿ ಸಿಬಿಐ ನೀಡಿದ ಸಾಕ್ಷ್ಯಗಳನ್ನು ಬ್ರಿಟನ್ ನ್ಯಾಯಾಲಯ ಸ್ವೀಕಾರಾರ್ಹ ಎಂದು ಹೇಳಿದೆ. 
ಬ್ಯಾಂಕ್ ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿರುವ ವಿಜಯ್ ಮಲ್ಯ, ಸುಸ್ತಿದಾರರಾಗಿದ್ದು, ಬ್ರಿಟನ್ ನಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಿಬಿಐ ಯತ್ನಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com