ಓಡಿ ಹೋಗಿ ಮದುವೆಯಾದ ಜೋಡಿಗೆ ಥಳಿತ, ಮೂತ್ರ ಕುಡಿಯುವಂತೆ ಬಲವಂತ!

ವಿರೋಧದ ನಡುವೆ ಓಡಿಹೋಗಿ ವಿವಾಹವಾದ ಜೋಡಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಎರಡು ಕುಟುಂಬಸ್ಥರು, ನವದಂಪತಿಗೆ ಮೂತ್ರ ಕುಡಿಯುವಂತೆ ಒತ್ತಾಯ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಧ್ಯಪ್ರದೇಶ :ವಿರೋಧದ ನಡುವೆ ಓಡಿಹೋಗಿ ವಿವಾಹವಾದ ಜೋಡಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಎರಡು ಕುಟುಂಬಸ್ಥರು, ನವದಂಪತಿಗೆ ಮೂತ್ರ ಕುಡಿಯುವಂತೆ ಒತ್ತಾಯ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಹರ್ ದಾಸ್ ಪುರ್ ನಲ್ಲಿ ನಡೆದಿದೆ. 
ವಧುವಿನ ಕುಟುಂಬಸ್ಥರಿಗೆ ಈ ವಿವಾಹ ಇಷ್ಟವಿರಲಿಲ್ಲ, ಹೀಗಾಗಿ  ಅಳಿಯ ಮತ್ತು ಮಗಳನ್ನು ಅಪಹರಿಸಿ, ಇಬ್ಬರನ್ನು ಥಳಿಸಿದ್ದಾರೆ.
ಮಹಿಳೆಯ ಬಟ್ಟೆ ಬಿಚ್ಚಿಸಿ ಆಕೆಯ ಕೂದಲನ್ನು ಕತ್ತರಿಸಲಾಗಿದ್ದು, ಈ ಜೋಡಿಗೆ ಮೂತ್ರ ಕುಡಿಯುವಂತೆ ಒತ್ತಾಯ ಮಾಡಲಾಗಿದೆ. ನಾವು ಓಡಿಹೋಗಿ ಮದುವೆಯಾಗಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಯುವಕ ತಿಳಿಸಿದ್ದಾನೆ, ಈ ಸಂಬಂಧ ಆರು ಮಂದಿ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com