ಹಲಾಲ್‌ನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂಗಳನ್ನು ಮದುವೆಯಾಗಿ: ಸಾಧ್ವಿ ಪ್ರಾಚಿ

ನಿಖಾ ಹಲಾಲ್ ಹಾಗೂ ತ್ರಿವಳಿ ತಲಾಕ್ ಶೋಷಣೆಯಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂ ಪುರುಷರನ್ನು ಮದುವೆ ಆಗಬೇಕು ಎಂದು ವಿಹೆಚ್ಪಿ ಮುಖಂಡೆ ಸಾಧ್ವಿ ಪ್ರಾಚಿ ಸಲಹೆ ನೀಡಿದ್ದಾರೆ.
ಸಾಧ್ವಿ ಪ್ರಾಚಿ
ಸಾಧ್ವಿ ಪ್ರಾಚಿ
Updated on
ಲಖನೌ: ನಿಖಾ ಹಲಾಲ್ ಹಾಗೂ ತ್ರಿವಳಿ ತಲಾಕ್ ಶೋಷಣೆಯಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂ ಪುರುಷರನ್ನು ಮದುವೆ ಆಗಬೇಕು ಎಂದು ವಿಹೆಚ್ಪಿ ಮುಖಂಡೆ ಸಾಧ್ವಿ ಪ್ರಾಚಿ ಸಲಹೆ ನೀಡಿದ್ದಾರೆ. 
ಮುಸ್ಲಿಂ ಸಮುದಾಯದ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಬೇಕು ಆಗ ತ್ರಿವಳಿ ತಲಾಕ್ ಹಾಗೂ ನಿಖಾ ಹಲಾಲ್ ನಂತಹ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು. ಇನ್ನು ಮಹಿಳೆಯರ ವಿರುದ್ಧ ಸುಳ್ಳು ಫತ್ವಗಳನ್ನು ನೀಡುವ ಮೌಲ್ವಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 
ನಿಖಾ ಹಲಾಲ್ ಮತ್ತು ತ್ರಿವಳಿ ತಲಾಕ್ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದ ಬರೇಲಿಯ ಮುಸ್ಲಿಂ ಮಹಿಳೆ ನಿದಾ ಖಾನ್ ಅವರನ್ನು ಸಾಧ್ವಿ ಪ್ರಾಚಿ ಭೇಟಿ ಮಾಡಿ ಆಕೆ ಹಿಂದೂ ಧರ್ಮ ಸ್ವೀಕರಿಸುವಂತೆ ಮನವೊಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕರು ಸಾಧ್ವಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com