ವಿವಾಹಕ್ಕೆ ಪರೊಲ್ ಕೇಳಿ ಸಲ್ಲಿಸಿದ್ದ ಅಬು ಸಲೇಂ ಅರ್ಜಿ ವಜಾ

ಮದುವೆ ಮಾಡಿಕೊಳ್ಳಲು 45 ದಿನಗಳ ಪರೊಲ್ ನೀಡುವಂತೆ ಭೂಗತ ಲೋಕದ ಪಾತಕಿ ಅಬು ಸಲೇಂ ...
ಅಬು ಸಲೇಂ
ಅಬು ಸಲೇಂ

ಮುಂಬೈ: ಮದುವೆ ಮಾಡಿಕೊಳ್ಳಲು 45 ದಿನಗಳ ಪರೊಲ್ ನೀಡುವಂತೆ ಭೂಗತ ಲೋಕದ ಪಾತಕಿ ಅಬು ಸಲೇಂ ಮಾಡಿರುವ ಮನವಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅಬು ಸಲೇಂ ಆಗಿದ್ದಾನೆ.
ಅಬು ಸಲೇಂ ಸಲ್ಲಿಸಿದ್ದ ಪರೊಲ್ ಅರ್ಜಿಯನ್ನು ನವಿ ಮುಂಬೈ ಆಯುಕ್ತರು ಕಳೆದ ಏಪ್ರಿಲ್ 21ರಂದು ತಿರಸ್ಕರಿಸಿದ್ದರು. ಎರಡನೇ ಮದುವೆಯಾಗುತ್ತಿರುವುದರಿಂದ ಪರೊಲ್ ಗೆ ಅನುಮತಿ ಕೋರಿ ಅಬು ಸಲೇಂ ಅರ್ಜಿ ಸಲ್ಲಿಸಿದ್ದ.

1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು 713 ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಅಬು ಸಲೇಂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. 2002ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಕೋರ್ಟ್ ನಿಂದ ಈಗಾಗಲೇ 7 ವರ್ಷ ಜೈಲುಶಿಕ್ಷೆ ಅನುಭವಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com